ಕರ್ನಾಟಕ

karnataka

ETV Bharat / state

ಬಸ್​​-ಬೈಕ್​​​ ನಡುವೆ ಡಿಕ್ಕಿ: ಸ್ಥಳದಲ್ಲಿಯೇ ಓರ್ವ ಸಾವು - ಬಸ್ ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿ

ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

Accident between bus and bike: one died
ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿ: ಸ್ಥಳದಲ್ಲಿಯೇ ಒಬ್ಬ ಸಾವು

By

Published : Dec 28, 2019, 9:21 PM IST

ಬಳ್ಳಾರಿ:ನಗರದ ಪಿಕಾಕ್ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲಿಯೇ ಒಬ್ಬ ಸಾವು

ಬೈಕ್‌ನಲ್ಲಿ ಇದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ವಿಮ್ಸ್​​ಗೆ ದಾಖಲಿಸಲಾಗಿದೆ. ಇನ್ನು ಆಂಧ್ರ ಪ್ರದೇಶದ ಹಾಲಹರವಿಯ ಇಬ್ಬರು ನಿವಾಸಿಗಳು ಬೈಕ್​ನಲ್ಲಿ‌ ಇದ್ದವರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳಾದ‌ ನಾಗರಾಜ್, ರಘು ಮತ್ತು ಸಿಬ್ಬಂದಿ ಆಗಮನಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಕುರಿತು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details