ಬಳ್ಳಾರಿ:ಬೊಲೆರೊ ಮತ್ತು ಬೈಕ್ ಮುಖಾಮುಖಿಯಾದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ ಬಳಿ ಇಂದು ನಡೆದಿದೆ.
ಬೊಲೆರೊ-ಬೈಕ್ ಮುಖಾಮುಖಿ.. ರಕ್ತದ ಮಡುವಿನಲ್ಲಿ ಬಿದ್ದು ಬೈಕ್ ಸವಾರ ಸಾವು! - ಸಂಡೂರು ತಾಲೂಕಿನ ಲಿಂಗದಹಳ್ಳಿ ಬಳಿ ಅಪಘಾತ
ಹೆಂಡತಿಯನ್ನು ಕೆಲಸಕ್ಕೆ ಬಿಡೆಲೆಂದು ಬೈಕ್‌ನಲ್ಲಿ ತೆರಳುತ್ತಿರುವ ವೇಳೆ ಬೊಲೆರೊ ಗಾಡಿಯೊಂದು ಅತೀ ವೇಗದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಂಡೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಬೈಕ್ ಸವಾರ ಗಂಗಾಧರ (30) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ತಿ. ಬೈಕ್‍ನಲ್ಲಿದ್ದ ಮೃತನ ಪತ್ನಿಗೆ ಗಂಭೀರ ಗಾಯವಾಗಿದ್ದು, ಜಿಂದಾಲ್ ಸಂಜಿವೀನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತ ಗಂಗಾಧರನ ಪತ್ನಿಯಾದ ಸುಧಾ ಅವರು ಬನ್ನಿಹಟ್ಟಿಯ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಅಡುಗೆ ಸಹಾಯಕಿ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿಯನ್ನು ಕೆಲಸಕ್ಕೆ ಬಿಡಲು ಬೆಳಗ್ಗೆ 6 ಗಂಟೆಗೆ ಲಿಂಗದಹಳ್ಳಿ ಗ್ರಾಮದಿಂದ ಬನ್ನಿಹಟ್ಟಿಗೆ ಬೈಕ್‌ನಲ್ಲಿ ತೆರಳುತ್ತಿರುವಾಗ ಬನ್ನಿಹಟ್ಟಿ ಗ್ರಾಮದ ಕಡೆಯಿಂದ ವೇಗವಾಗಿ ಆಗಮಿಸಿದ ಬೊಲೆರೊ ವಾಹನವು ನೇರವಾಗಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಗಂಗಾಧರ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಗಾದಿಗನೂರು ಪೊಲೀಸ್ ಠಾಣೆಯ ಪಿಎಸ್‍ಐ ಶೈಲಜಾ ತಿಳಿಸಿದ್ದಾರೆ.ಈ ಕುರಿತು ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.