ಕರ್ನಾಟಕ

karnataka

ETV Bharat / state

ಲಾರಿ-ಬೈಕ್​ ನಡುವೆ ಅಪಘಾತ: ಬೈಕ್​ ಸವಾರ ಸಾವು - ಬಳ್ಳಾರಿ ಲೆಟೆಸ್ಟ್​ ಕ್ರೈಂ ನ್ಯೂಸ್​

ಲಾರಿಯೊಂದು ಬೈಕ್​ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ನಡೆದಿದೆ. ಉಜ್ಜಿನಿ ಗ್ರಾಮದ ಅನಂದಪ್ಪ(45) ಮೃತ ವ್ಯಕ್ತಿ.

Accident: Bike rider died
ಲಾರಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು

By

Published : Apr 29, 2020, 5:35 PM IST

ಬಳ್ಳಾರಿ:ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ ಇಂದು ನಡೆದಿದೆ.


ಉಜ್ಜಿನಿ ಗ್ರಾಮದ ಅನಂದಪ್ಪ(45) ಮೃತ ವ್ಯಕ್ತಿ. ಕೊಟ್ಟೂರು ಕಡೆಯಿಂದ ಜಗಳೂರು ಕಡೆ ಹೊರಟಿದ್ದ ಲಾರಿ, ಟಿವಿಎಸ್ ಬೈಕ್​ನಲ್ಲಿ ಮನೆಗೆ ತರಳುತ್ತಿದ್ದ ವೇಳೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಸ್ಥಳೀಯ ಅಸ್ಪತ್ರೆಗೆ ದಾಖಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ ಎನ್ನಲಾಗಿದೆ.

ಅಪಘಾತಕ್ಕೆ ಲಾರಿ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details