ಬಳ್ಳಾರಿ:ಬಳ್ಳಾರಿಯ ಕೇಂದ್ರ ತೆರಿಗೆ (ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು, ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರ ಈಶ್ವರಯ್ಯ ಅವರ ಜಿಎಸ್‌ಟಿ ದಂಡದ ಹಣ ರದ್ದು ಮಾಡಿ ಪ್ರಕರಣ ಮುಕ್ತಾಯ ಮಾಡಲು 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಸ್ವೀಕರಿಸುತ್ತಿದ್ದಾಗ ಸಿಬಿಐ (ಎಸಿಬಿ) ಬೆಂಗಳೂರು ಮತ್ತು ಬಳ್ಳಾರಿ ಎಸಿಬಿ ತಂಡಗಳು ಕ್ಷಿಪ್ರ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಮಧುಸೂದನ್ ಅವರನ್ನು ಖೆಡ್ಡಾಗೆ ಬಿಳಿಸುವಲ್ಲಿ ಯಶಸ್ವಿಯಾಗಿವೆ.
ಸಿಬಿಐ(ಎಸಿಬಿ) ಬೆಂಗಳೂರಿನ ವಿಶೇಷ ತಂಡವು ಮತ್ತು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳ ತಂಡಗಳು ಇಂದು ಯಶಸ್ವಿ ಕಾರ್ಯಾಚರಣೆ ನಡೆಸಿ, ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರನ್ನು ಬಲೆಗೆ ಬಿಳಿಸಿವೆ. ಬಳ್ಳಾರಿ ನಗರದ ನಿವಾಸಿಯಾದ ಈಶ್ವರಯ್ಯ ತಂದೆ ಜಿ.ನರಸಿಂಹಯ್ಯ ಅವರು ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರಾಗಿದ್ದರು. ಇವರ ಜಿಎಸ್‌ಟಿ ದಂಡದ ಹಣ ರದ್ದು ಮಾಡಿ ಪ್ರಕರಣ ಕೈಬಿಡಲು ಈಶ್ವರಯ್ಯ ಅವರಿಗೆ ಕೇಂದ್ರ ತೆರಿಗೆ(ಜಿಎಸ್‌ಟಿ ವಿಭಾಗ) ಕಚೇರಿಯ ಅಧೀಕ್ಷಕ ಮಧುಸೂಧನ್ ಅವರು 80 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಸಿಬಿಐ(ಎಸಿಬಿ) ಬೆಂಗಳೂರು ಅವರಲ್ಲಿ ಪ್ರಕರಣ ದಾಖಲಾಗಿತ್ತು.