ಕರ್ನಾಟಕ

karnataka

ETV Bharat / state

ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಬಳ್ಳಾರಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕ - ಬಳ್ಳಾರಿ ನಗರ ಪಾಲಿಕೆ ಆಯುಕ್ತ ಕಚೇರಿ ಮೇಲೆ ಎಸಿಬಿ ದಾಳಿ

ಅರ್ಜಿ ಫಾರಂ ನೀಡಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟ ದೂರಿನ ಮೇರೆಗೆ ಬಳ್ಳಾರಿ ನಗರ ಪಾಲಿಕೆ ಆಯುಕ್ತರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ACB Ride on Bellary BMC  Commissioner's Office
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮೇಲೆ ಎಸಿಬಿ ರೇಡ್​

By

Published : Oct 9, 2020, 4:46 PM IST

ಬಳ್ಳಾರಿ : ಫಾರಂ ನಂಬರ್ - 2 ರ ಅರ್ಜಿ ನೀಡಲು ಮಹಾನಗರ ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಹಾಗೂ ಕಚೇರಿಯ ಕ್ಲರ್ಕ್ ಸುಮಾರು 60 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ದೂರಿನ ಹಿನ್ನೆಲೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ತಂಡವು ದಾಳಿ‌ ನಡೆಸಿದೆ.

ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ ಎಂಬುವರು ಫಾರಂ ನಂಬರ್ 2 ರ ಅರ್ಜಿ ನೀಡುವಂತೆ ಮಹಾನಗರ ಪಾಲಿಕೆಯ ಕಚೇರಿಯನ್ನು ಕೋರಿದ್ದರು. ‌ಎರಡ್ಮೂರು ದಿನಗಳಾದರೂ ಅರ್ಜಿ ದೊರಕದ ಕಾರಣ ಪಾಲಿಕೆ ಆಯುಕ್ತರ ಆಪ್ತ ಸಹಾಯಕರನ್ನು ಭೇಟಿ ಮಾಡಿದ್ದರು.‌ ಈ ವೇಳೆ ಫಾರಂ- 2 ರ ಅರ್ಜಿ ನೀಡಬೇಕಾದರೆ, ಮಹಾನಗರ ಪಾಲಿಕೆ ಆಯುಕ್ತರಿಗೆ 60 ಸಾವಿರ ರೂ. ನೀಡಬೇಕು ಎಂದು ಆಯುಕ್ತರ ಆಪ್ತ ಸಹಾಯಕ ತಿಳಿಸಿದ್ದನಂತೆ. ಇದಕ್ಕೆ ಒಪ್ಪಿದ ದೈಹಿಕ ಶಿಕ್ಷಕ, ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಮೊದಲನೇ ಕಂತಿನ 50 ಸಾವಿರ ರೂ. ನೀಡಲು ಹೋಗಿದ್ದರು. ಲಂಚ ಸ್ವೀಕರಿಸುವಾಗ ಆಯಕ್ತರ ಆಪ್ತ ಸಹಾಯಕ ಮಲ್ಲಿಕಾರ್ಜುನ ಪಾಟೀಲ ಮತ್ತು ಕಚೇರಿ ಕ್ಲರ್ಕ್​ ಬಾಷಾ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ.

ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಮೇಲೆ ಎಸಿಬಿ ರೇಡ್​

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ದೈಹಿಕ ಶಿಕ್ಷಕ ಚಂದ್ರಶೇಖರ, ಖಾಸಗಿ‌ ಶಾಲೆಯನ್ನು ಮತ್ತಷ್ಟು ವಿಸ್ತರಣೆ ಮಾಡುವ ಸಲುವಾಗಿ ಫಾರಂ -2 ರ ಅರ್ಜಿ ಸಲ್ಲಿಸಿದ್ದೆ. ಕಚೇರಿಗೆ ಅಲೆದಾಟ ನಡೆಸಿ ರೋಸಿ ಹೋಗಿದ್ದಾಗ, ಪಾಲಿಕೆ ಆಯುಕ್ತರ ಆಪ್ತ ಸಹಾಯಕರನ್ನ ಭೇಟಿ ಮಾಡಿದರೆ ಸಹಾಯ ಆಗಬಹುದೆಂದು ನನಗೊಬ್ಬರು ಸಲಹೆ ನೀಡಿದ್ದರು. ಹೀಗಾಗಿ, ನಾನು ಆಪ್ತ ಸಹಾಯಕ ಮಲ್ಲಿಕಾರ್ಜುನನನ್ನು ಭೇಟಿಯಾದೆ. ಅವರು ಏಕಾಏಕಿ ಲಂಚದ ಬೇಡಿಕೆಯಿಟ್ಟರು. ಇಂದು 50 ಸಾವಿರ ರೂ. ನೀಡಲು ಹೋಗುವ ಮುನ್ನ ಎಸಿಬಿಗೆ ದೂರು ಕೊಟ್ಟಿದ್ದೆ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆಯ ಆಯುಕ್ತೆ ಎಂ.ವಿ. ತುಷಾರಮಣಿ, ಇದಕ್ಕೂ ನಮ್ಮ ಕಚೇರಿಗೂ ಸಂಬಂಧವೇ ಇಲ್ಲ. ಕೆಳ ಹಂತದ ಅಧಿಕಾರಿ ವರ್ಗಕ್ಕೆ ಈ ಮೊದಲೇ ಸೂಚನೆ ನೀಡಿದ್ದೆ. ಯಾವುದೇ ಲಂಚ ಅಥವಾ ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದೆಂದು ಕಟ್ಟುನಿಟ್ಟಾಗಿ ತಿಳಿಸಿದ್ದೆ. ನನ್ನ ಬಳಿಯಂತೂ ಈ‌ ಫೈಲ್ ಬಂದೇ ಇಲ್ಲ. ಕಳೆದ ಹದಿನೈದು ದಿನಗಳಿಂದಲೂ ಅನಾರೋಗ್ಯದ ಕಾರಣ ಕೊಟ್ಟಿದ್ದೆ. ಹೀಗಾಗಿ, ನನ್ನ ಬಳಿ ಯಾವುದೇ ಫೈಲ್ ಆತ ತಂದಿರಲಿಲ್ಲ. ನಮ್ಮ‌ ಕಚೇರಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ತಿಳಿಸಿದರು.

ಆಯುಕ್ತೆ ತುಷಾರಮಣಿ ಹೈಡ್ರಾಮಾ : ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾಲಿಕೆಯ ಆಯುಕ್ತರ ಕಚೇರಿಗೆ ಆಗಮಿಸಿದ ಆಯುಕ್ತೆ ತುಷಾರಮಣಿ, ಸಿಬ್ಬಂದಿಯಿಂದ ಕಚೇರಿ ಬೀಗ ತೆಗೆಸಿದರು. ಬಳಿಕ ಯುವತಿಯೊಬ್ಬಳನ್ನು ಒಳಗೆ ಕಳಿಸಿ ಯಾವುದಾದರೂ ಫೈಲ್ ಇದೆಯಾ ಎಂದರು. ಈ ವೇಳೆ ಎಸಿಬಿ ಅಧಿಕಾರಿಗಳು ಆಯುಕ್ತೆ ಬಳಿ ಬಂದರು. ಆಗ, ಅವರನ್ನು ತಡೆದ ಆಯುಕ್ತೆ, ನೀವು ಯಾರಾದರೂ ಒಬ್ಬರು ಹೋಗಿ ನೋಡಿ ಬನ್ನಿ, ನಿಮ್ಮೊಂದಿಗೆ ಯಾರಾದರೂ ಹೋಗಿ ಇಟ್ಟು ಬಂದರೆ ಹೇಗೆ..? ಎಂದರು. ಈ ವೇಳೆ ಎಸಿಬಿ ಅಧಿಕಾರಿಗಳು ಮತ್ತು ಆಯುಕ್ತೆ ನಡುವೆ ಮಾತಿನ ಚಕಮಕಿ ನಡೆಯಿತು.

ABOUT THE AUTHOR

...view details