ಹೊಸಪೇಟೆ:ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ನಗರದ ಉಪನೋಂದಣಾಧಿಕಾರಿಯವರ ಕಚೇರಿ, ಅವರ ಮನೆ ಹಾಗೂ ಕೂಡ್ಲಿಗಿಯ ಅವರ ಮಾವನ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಪನೋಂದಣಾಧಿಕಾರಿ ಪ್ರಭಾಕರ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಾಯಚೂರು ಎಸಿಬಿ ಇನ್ಸ್ಪೆಕ್ಟರ್ ಹನುಮಂತಪ್ಪ ಸಣ್ಣಮನೆ ತಂಡ, ಬಸವೇಶ್ವರ ಬಡಾವಣೆಯ ಮನೆಯಲ್ಲಿ ಬಳ್ಳಾರಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ನೇತೃತ್ವದ ತಂಡ ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಮಾವನ ಮನೆಯಲ್ಲಿ ಬಳ್ಳಾರಿ ಎಸಿಬಿ ಎಸ್ಪಿ ಗುರುನಾಥ ಬಿ. ಮತ್ತೂರ್ ಅವರು ಏಕಕಾಲದಲ್ಲಿ ದಾಳಿ ಮಾಡಿ ದಾಖಲೆ ಸಂಗ್ರಹಿಸುತ್ತಿದ್ದಾರೆ.