ಕರ್ನಾಟಕ

karnataka

ETV Bharat / state

ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಇಲ್ಲವೇ ದಂಡ ಕಟ್ಟಿ: ಎಸಿ ವಾರ್ನಿಂಗ್ - AC Siddarameshwara Press Meet

ಮಾರ್ಕೆಟ್‌ನಲ್ಲಿ ಹೆಚ್ಚಿನ ಜನರು ಸೇರುತ್ತಿದ್ದಾರೆ. ಇದನ್ನು ತಪ್ಪಿಸಲು ತಂಡಗಳನ್ನು ರಚನೆ ಮಾಡುವ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ. ಆ ತಂಡದಲ್ಲಿ ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಇರಲಿದ್ದಾರೆ. ಅಲ್ಲದೇ, ಮಾಸ್ಕ್ ಧರಿಸದಿದ್ದರೆ ಹಾಗೂ ಸಾಮಾಜಿಕ‌ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ದಂಡವನ್ನು ಹಾಕಲಾಗುವುದು ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿಕೆ
ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿಕೆ

By

Published : Apr 23, 2021, 12:52 PM IST

ಹೊಸಪೇಟೆ: ನಗರದ ಉಪವಿಭಾಗದ ಮಟ್ಟದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನೂರು ಹಾಸಿಗೆ, ಆರು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೆರಡು ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ

ನಗರದ ಉಪವಿಭಾಗದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಪೇರಿ ಇರುವ ವೆಂಟಿಲೇಟರ್‌ಗಳಲ್ಲಿ‌‌ ಸಣ್ಣ ಸಮಸ್ಯೆಗಳಿವೆ. ಅವುಗಳನ್ನು ಒಂದೇ ದಿನದಲ್ಲಿ ಸರಿ ಮಾಡಲಾಗುವುದು. ಅಲ್ಲದೇ ಇದರಿಂದ ಕೋವಿಡ್ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಓದಿ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ‌ ಬೆಡ್-ಆಕ್ಸಿಜನ್​ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ

ABOUT THE AUTHOR

...view details