ಕರ್ನಾಟಕ

karnataka

ETV Bharat / state

ಬಳ್ಳಾರಿ: ಕಾನೂನು ಪದವಿ ಪರೀಕ್ಷೆಗಳನ್ನು ನಡೆಸಬಾರದೆಂದು ಸರ್ಕಾರಕ್ಕೆ ಎಬಿವಿಪಿ ಮನವಿ - law degree examinations

ಕಾನೂನು ಪದವಿ ಪರೀಕ್ಷೆಗಳನ್ನು ನಡೆಸದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಬಿವಿಪಿ ಮನವಿ
ಎಬಿವಿಪಿ ಮನವಿ

By

Published : Aug 19, 2020, 6:55 PM IST

ಬಳ್ಳಾರಿ: ರಾಜ್ಯದಲ್ಲಿ ಕಾನೂನು ಪದವಿ ಪರಿಕ್ಷೆಗಳನ್ನು ಸದ್ಯಕ್ಕೆ ನಡೆಸದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಘಟಕದ ಸದಸ್ಯರು ಹಾಗೂ ವಿದ್ಯಾರ್ಥಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕಾನೂನು ಪರೀಕ್ಷೆಗಳನ್ನು ನಡೆಸದಂತೆ ಯುಜಿಸಿ ನಿರ್ದೇಶನ ನೀಡಿದ್ದರೂ ಅದನ್ನು ಉಲ್ಲಂಘಿಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸರ್ಕಾರದ ಕ್ರಮ ಸರಿ ಇಲ್ಲ. ಕೂಡಲೇ ಪರೀಕ್ಷೆ ನಡೆಸದಂತೆ ಆದೇಶ ನೀಡಬೇಕು. ಪರೀಕ್ಷಾ ಶುಲ್ಕವನ್ನು ಆ.24ರೊಳಗೆ ಪಾವತಿಸಬೇಕೆಂಬ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಮೊದಲ, ದ್ವಿತೀಯ, ತೃತೀಯ ವರ್ಷಗಳಲ್ಲಿ ಅನುತ್ತೀರ್ಣರಾದವರು ಮರುಮೌಲ್ಯಮಾಪನಕ್ಕೆ ಕೋರಿದಾಗ ಇದೇ ನೆಪದಲ್ಲಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಕೊರೊನಾ ಸಂಕಷ್ಟ ದಿನಗಳಲ್ಲಿ ಪರೀಕ್ಷೆ ನಡೆಸದೆ ಯುಜಿಸಿ ನಿಯಮ ಪಾಲಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಪರಿಷತ್‌ನ ರಾಜ್ಯ ಸಹ ಕಾರ್ಯದರ್ಶಿ ಮಾದಿಹಳ್ಳಿ ಕೆ. ಮಂಜಪ್ಪ, ತಾಲೂಕು ಸಂಚಾಲಕ ಚಿರಿಬಿ ತಿಪ್ಪೇಸ್ವಾಮಿ, ಸಿದ್ದೇಶ, ಸಂದೇಶ, ವೆಂಕಟೇಶ್‌ನಾಯ್ಕ, ಆಕಾಶ್, ಅಮೀರ್, ಪ್ರಸಾದ ದೇವರಮನಿ, ರಾಜು ಅಲಬೂರು ಇದ್ದರು.

ABOUT THE AUTHOR

...view details