ಹೊಸಪೇಟೆ: ಬಿಜೆಪಿ ಶಾಸಕರು ಹಬ್ಬದ ಶುಭಾಶಯಗಳು ತಿಳಿಸಲು ಒಂದೆಡೆ ಸೇರಿದ್ದಾರೆ. ಇಲ್ಲಿ ಅಲೆದಾಡುವ ಪ್ರಶ್ನೆಯೇ ಬರುವುದಿಲ್ಲ. ಮಂತ್ರಿಗಿರಿಗಾಗಿ ಯಾರು ಹೋಗುತ್ತಿಲ್ಲ. ಮಂತ್ರಿ ಮಾಡುವುದು ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಯಾರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದನ್ನ ಸಿಎಂ ನಿರ್ಧರಿಸುತ್ತಾರೆ: ಬಿ.ಸಿ. ಪಾಟೀಲ್ - ಯಾರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದನ್ನ ಸಿಎಂ ನಿರ್ಧಾರ ಮಾಡುತ್ತಾರೆ ಬಿ.ಸಿ.ಪಾಟೀಲ್
ಬಿಜೆಪಿಯಲ್ಲಿ ಮೂಲ, ವಲಸಿಗರು ಅನ್ನೋದು ಏನಿಲ್ಲ. ಬಿಜೆಪಿ ಸೇರಿದ 17 ಶಾಸಕರನ್ನ ಪಕ್ಷ ಗೌರವದಿಂದ ನಡೆಸಿಕೊಳ್ಳುತ್ತಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದನ್ನ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸಚಿವ ಸ್ಥಾನ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪಕ್ಷದಲ್ಲಿ ಮೂಲ, ವಲಸಿಗರು ಅನ್ನೋದು ಏನಿಲ್ಲ. ಬಿಜೆಪಿ ಸೇರಿದ 17 ಶಾಸಕರನ್ನ ಪಕ್ಷ ಗೌರವದಿಂದ ನಡೆಸಿಕೊಳ್ಳುತ್ತಿದೆ. ನಾವೆಲ್ಲಾ ಅಣ್ಣ-ತಮ್ಮಂದಿರ ತರಹ ಇದ್ದೇವೆ, ಆ ರೀತಿಯ ಭಾವನೆಗಳು ಇಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದನ್ನ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.
Last Updated : Nov 19, 2020, 2:44 PM IST