ಕರ್ನಾಟಕ

karnataka

ETV Bharat / state

ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ... ಕ್ರಮಕ್ಕೆ ಆಗ್ರಹ - Street dog attacks on 2 years old boy

ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಹೊಸಪೇಟೆಯ ಸ್ಥಳೀಯರು ಆಗ್ರಹಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ನಾಯಿಗಳು ಬಾಲಕನ‌ ಮೇಲೆ ದಾಳಿ‌ ಮಾಡಿರುವ ಮಾಹಿತಿ ಇಲ್ಲ. ನಾಯಿಗಳ ಉಪಟಳ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

a-young-boy-injured-in-a-street-dog-attack
ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಬಾಲಕ

By

Published : Feb 22, 2021, 9:05 PM IST

ಹೊಸಪೇಟೆ:ನಗರದಲ್ಲಿ ಬೀದಿನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿನ ರಾಣಿಪೇಟೆ ನಿವಾಸಿ ಪೂರ್ಣಿಮಾ ಅವರ 2 ವರ್ಷದ ಮಗನ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಆರೋಪ ಕೇಳಿ ಬಂದಿದೆ.

ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಬಾಲಕ

ಬಾಲಕನ ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದ್ದು, ಬೀದಿ ನಾಯಿಗಳಿಂದ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಓದಿ:ರೇಷ್ಮೆ ಮಾರುಕಟ್ಟೆ ಸ್ಥಳಾಂತರಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ : ಡಿಸಿಎಂ ಅಶ್ವತ್ಥ್‌ ನಾರಾಯಣ

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ, ನಾಯಿಗಳು ಬಾಲಕನ‌ ಮೇಲೆ ದಾಳಿ‌ ಮಾಡಿರುವ ಮಾಹಿತಿ ಇಲ್ಲ. ಅವುಗಳ ದಾಳಿಗೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ABOUT THE AUTHOR

...view details