ಕರ್ನಾಟಕ

karnataka

ETV Bharat / state

ಮಕ್ಕಳಾಗಲಿಲ್ಲವೆಂದು ಮಹಿಳೆಗೆ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ.. ವಿಜಯನಗರದಲ್ಲಿ ರಾಕ್ಷಸಿ ಕೃತ್ಯ - ವಿಜಯನಗರದಲ್ಲಿ ರಾಕ್ಷಸಿ ಕೃತ್ಯ

ಮಕ್ಕಳಾಗಲಿಲ್ಲವೆಂದು ಮಹಿಳೆ ಬಾಯಿಗೆ ಬಟ್ಟೆ ತುರುಕಿ, ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

murder
ಕೊಲೆ

By

Published : Nov 19, 2022, 7:36 AM IST

ವಿಜಯನಗರ: ಮಕ್ಕಳಾಗಲಿಲ್ಲವೆಂದು ಪತ್ನಿಯನ್ನೇ ಆಕೆಯ ಪತಿ ಹಾಗೂ ಕುಟುಂಬಸ್ಥರು ಸೇರಿ ಬಾಯಿಗೆ ಬಟ್ಟೆ ತುರುಕಿ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ ಮಾಡಿರುವ ಅಮಾನವೀಯ ಘಟನೆ ವಿಜಯನಗರದಲ್ಲಿ ನಡೆದಿದೆ. ಈ ಕುರಿತು ಮಹಿಳೆಯ ಪೋಷಕರು ಕೊಟ್ಟೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಈರಮ್ಮ ಮೃತ ಕೊಲೆಯಾದ. ಇವರ ಪತಿ ಆನಂದ ಕೊಟ್ರಬಸಪ್ಪ, ವೀರೇಶ, ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ಪಟ್ಟಣದಲ್ಲಿ ಫೋಟೋಗ್ರಾಫರ್ ಆಗಿದ್ದ ಆನಂದ್​ಗೆ ಈರಮ್ಮರನ್ನು ಮದುವೆ ಮಾಡಿಕೊಡಲಾಗಿತ್ತು. ಮಕ್ಕಳಾಗದ ಕಾರಣ ಗಂಡ ಹಾಗೂ ಅತನ ಮನೆಯವರು ದಿನನಿತ್ಯ ಹೊಡೆಯುತ್ತಿದ್ದರು. ನವೆಂಬರ್​ 16 ರಿಂದ 18ರ ಮೂರು ದಿನಗಳವರೆಗೆ ಈರಮ್ಮಗೆ ಹೊಡೆದು, ಬಳಿಕ ರುಬ್ಬುವ ಗುಂಡಿನಿಂದ ಮುಖ ಮತ್ತು ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆಂದು ಮೃತಳ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಸಂಬಂಧಕ್ಕೆ ಒಲ್ಲದ ಕುರಿ ಮೇಯಿಸುತ್ತಿದ್ದ ಮಹಿಳೆ ಕೊಲೆ, ಆರೋಪಿ ಸೆರೆ

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಿ ಹರೀಶ್, ಸರ್ಕಲ್ ಇನ್ಸ್​ಪೆಕ್ಟರ್ ಸೋಮಶೇಖರ ಹೆಚ್. ಕೆಂಬಾರೆಡ್ಡಿ, ಸಬ್ ಇನ್ಸ್​ಪೆಕ್ಟರ್ ವಿಜಯಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!

ABOUT THE AUTHOR

...view details