ಕರ್ನಾಟಕ

karnataka

ETV Bharat / state

ಭಿಕ್ಷೆ ಬಿಟ್ಟು, ಹಾಡು ಹಾಡಿ ಮಂಗಳಮುಖಿಯ ಸ್ವಾವಲಂಬನೆಯ ಬದುಕು! - transgender life

ಇಲ್ಲೊಬ್ಬ ಮಂಗಳಮುಖಿ ಸ್ವಾವಲಂಬನೆ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಕರೋಕೆ ಮೂಲಕ ಸಿನಿಮಾ, ಜಾನಪದ ಹಾಡು ಹಾಡಿ, ಅದರಿಂದ ಬಂದ ಸಂಭಾವನೆಯಿಂದ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ.

ಹಾಡು ಹಾಡಿ ಮಂಗಳಮುಖಿಯ ಸ್ವಾವಲಂಬನೆ ಬದುಕು

By

Published : Sep 19, 2019, 10:59 PM IST

Updated : Sep 21, 2019, 11:07 PM IST

ಬಳ್ಳಾರಿ: ಸಮಾಜದಲ್ಲಿನ ಲೈಂಗಿಕ ಅಲ್ಪಸಂಖ್ಯಾತರು ಅಥವಾ ಮಂಗಳಮುಖಿಗಳು ದಿನನಿತ್ಯದ ಜೀವನದಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿರುವುದನ್ನು ನೋಡಿರಬಹುದು. ಆದ್ರೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಮಂಗಳಮುಖಿ ದುರ್ಗ ಭಿಕ್ಷೆ ಬೇಡುವ ಬದಲು ಕರೋಕೆ ಹಾಡುಗಳನ್ನು ಹಾಡಿ ಅದ್ರಲ್ಲಿ ಬಂದಿರುವ ಹಣದಿಂದ ತನ್ನ ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಯಾವುದೇ ಓದಿನ ಅಭ್ಯಾಸ ಮಾಡಿಲ್ಲ:

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮೂಧೋಳ ಗ್ರಾಮದ ದಂಪತಿ ಎಮನೂರಪ್ಪ ಮತ್ತು ಕನಕಮ್ಮ ಅವರ ಕೊನೆಯ ಮಗಳು ದುರ್ಗ. ಇವರು ಯಾವುದೇ ವಿದ್ಯಾಭ್ಯಾಸ ಮಾಡದೇ ಸಿನಿಮಾ ಮತ್ತು ಜಾನಪದ ಹಾಡಿನ ಮೊದಲನೇ ಸಾಲಿನ ಮೊದಲ ಅಕ್ಷರದ ನೆನಪಿನಿಂದ ಸಂಪೂರ್ಣ ಹಾಡನ್ನು ಹಾಡುತ್ತಾರೆ. ಅದರಲ್ಲಿ ಡಾ.ರಾಜ್ ಕುಮಾರ್ ಅವರ ಹಾಡುಗಳು ಎಂದರೆ ಬಹಳ ಇಷ್ಟ. ಅವುಗಳನ್ನು ಹೆಚ್ಚಾಗಿ ಹಾಡುತ್ತಾರೆ.

ಹಾಡು ಹಾಡಿ ಮಂಗಳಮುಖಿಯ ಸ್ವಾವಲಂಬನೆ ಬದುಕು

ಎಲ್ಲಿ ಕಾರ್ಯಕ್ರಮ:

ಕನ್ನಡ ಕೋಗಿಲೇ ಸಿಂಧನೂರು, ಬಳ್ಳಾರಿ, ಯಲರ್ಬುಗಾ ಮತ್ತು ಗಾನಸುಧೆ ರಾಯಚೂರು, ಬಳ್ಳಾರಿಯ ಕುಕನೂರುನಲ್ಲಿ ಕರೋಕೆ ಹಾಡುಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾಗಿ ಪ್ರಥಮ, ದ್ವೀತಿಯ ಸ್ಥಾನಗಳನ್ನು ಪಡೆದಿದ್ದೇನೆ.

ಸರ್ಕಾರದ ಯಾವುದೇ ಸೌಲಭ್ಯ ಪಡೆದಿಲ್ಲ:

ಮಂಗಳಮುಖಿಯಾಗಿ ಸರ್ಕಾರ ಕಡೆಯಿಂದ ಯಾವುದೇ ಪಿಂಚಣಿ ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದರು. ಅನೇಕ ಬಾರಿ ಅರ್ಜಿಗಳನ್ನು ಸಲ್ಲಿಸಿದ್ದೇನೆ. ಆದ್ರೆ ಇದುವರೆಗೂ ಯಾವುದೇ ಸೌಲಭ್ಯ ಬಂದಿಲ್ಲ. ಅದರ ಬದಲಾಗಿ ಕರೋಕೆ ಹಾಡುಗಳನ್ನು ಹಾಡುತ್ತ ಇದ್ದೆ. ಕಾರ್ಯಕ್ರಮಕ್ಕೆ ಕರೆಸಿದ ಸಂಘ ಸಂಸ್ಥೆಯವರಿಂದ ನೀಡಿದ ಸಹಾಯಧನವನ್ನು ಪಡೆದುಕೊಂಡು ತನ್ನ ತಾಯಿಯೊಂದಿಗೆ ಜೀವನವನ್ನು ಮಾಡ್ತಾ ಇದ್ದೀನಿ ಎಂದರು‌.

ಸಮಾಜದಲ್ಲಿ ನಾವು ಒಬ್ಬರು ಎಂಬ ಭಾವನೆ ಇರಲಿ:

ಕುಟುಂಬಗಳಲ್ಲಿ ಮಕ್ಕಳ ಮದುವೆ ಮಾಡುವುದು ಪೋಷಕರು ಜವಾಬ್ದಾರಿಯಾಗಿರುತ್ತದೆ. ಆದ್ರೆ ಆ ಕಾರ್ಯಕ್ರಮಕ್ಕೆ ಮಂಗಳಮುಖಿಗಳು ಹೋದ್ರೆ ಅನಿಷ್ಟ, ಕೆಟ್ಟದು ಆಗುತ್ತದೆ. ಇನ್ನಿತರ ಮಾತುಗಳನ್ನು ಆಡುತ್ತಾರೆ. ಹಾಗೆಯೇ ಭಿಕ್ಷೆ ಬೇಡಿದ್ರೆ ಸಮಾಜ ಅದನ್ನು ವಿರೋಧ ಮಾಡುತ್ತೆ. ಹಾಗಾಗಿ ಸಿನಿಮಾ ಮತ್ತು ಜಾನಪದ ಕರೋಕೆ ಹಾಡುಗಳನ್ನು ಏಕೆ ಹಾಡಬಾರದು ಎನ್ನುವ ಭಾವನೆಯಿಂದ ಮೊಬೈಲ್​ನಲ್ಲಿ ಹಾಡುಗಳನ್ನು ಕೇಳಿ, ಕರೋಕೆ ಬಳಸಿ ಹಾಡುವುದನ್ನು ಕಲಿತಿರುವೆ ಎಂದು ತಿಳಿಸಿದರು.

ಹಾಡು ಹಾಡಿ ಮಂಗಳಮುಖಿಯ ಸ್ವಾವಲಂಬನೆ ಬದುಕು

ದುರ್ಗ ಬಗ್ಗೆ :

ಈ ಹಿಂದೆ ನಾನು ಸಹ ಭಿಕ್ಷೆ ಬೇಡಿರುವೆ. ಕಳೆದ ಎರಡು ವರ್ಷಗಳಿಂದ ಭಿಕ್ಷೆ ಬೇಡುವುದನ್ನು ಬಿಟ್ಟಿದ್ದೇನೆ ಎಂದರು. ಇತ್ತೀಚಿನ ದಿನಗಳಲ್ಲಿ ಸಂಪ್ರದಾಯವಾಗಿ ಇರುವ ಮಂಗಳಮುಖಿಗಳಿಗೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೋ ತಪ್ಪು ಮಾಡಿದ್ದರಿಂದ ನಮ್ಮನ್ನು ಅದೇ ರೀತಿಯಲ್ಲಿ ನೋಡುತ್ತಾರೆ ಎಂದರು. ಈ ವಿಚಾರದಲ್ಲಿ ಬಹಳ‌ ನೋವಿದೆ. ಒಂದಲ್ಲ ಒಂದು ದಿನ ಒಳ್ಳೆಯ ವೇದಿಕೆ ದೊರೆಯುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಮಾಡಿ ಹಾಡುಗಳನ್ನು ಹಾಡುವ ಮೂಲಕ ತನ್ನ ಪ್ರತಿಭೆಯನ್ನು ಹೊರಹಾಕಬೇಕೆಂದಿರುವೆ ಎಂದರು.

ಹಣ ಕಲೆಕ್ಷನ್‌ಗೆ ಹೋದರೆ ಸಮಸ್ಯೆ.. ಹಾಡು ಹಾಡಿದ್ರೂ ಮತ್ತೊಂದು ಸಮಸ್ಯೆ.. ಹಾಡು ಹಾಡಲು ಅವಕಾಶ ಮಾಡಿಕೊಡಿ ಎಂದು ಸಮಾಜದ ಜನರಲ್ಲಿ ಅವರು ಕೈಮುಗಿದು ಬೇಡಿಕೊಂಡರು‌.

Last Updated : Sep 21, 2019, 11:07 PM IST

ABOUT THE AUTHOR

...view details