ಕರ್ನಾಟಕ

karnataka

ETV Bharat / state

ದಶಕದಿಂದ ಕುಸಿದಿಲ್ಲ ಕಟ್ಟಡ: ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ನಿರ್ಲಕ್ಷ್ಯ ಬೇಡ

ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ನಗರದ ಪ್ರತಿಯೊಂದು ವಾರ್ಡಿಗೂ ತೆರಳಿ ಶಿಥಿಲಗೊಂಡ ಕಟ್ಟಡಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಅಂತಹ ಕಟ್ಟಡಗಳನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿ ಹೇಳಿದರು.

The dilapidated building
ಶಿಥಿಲಗೊಂಡ ಕಟ್ಟಡ

By

Published : Nov 9, 2020, 2:05 PM IST

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆ ಕಟ್ಟಡಗಳೇ ಇಲ್ಲವಂತೆ. ದಶಕದ ಹಿಂದಷ್ಟೇ ನಿರ್ಮಾಣ ಹಂತದ ಕಟ್ಟಡದ ಕುಸಿತ ಕಂಡು ಪ್ರಾಣಹಾನಿ ಸಂಭವಿಸಿದ್ದು ಬಿಟ್ಟರೆ, ಈವರೆಗೂ ಅಂತಹ ಅವಘಡವೇ ಸಂಭವಿಸಿಲ್ಲ. ಇದೊಂದು ಸಮಾಧಾನಕರ ಸಂಗತಿಯಾದರೂ ಪಾಲಿಕೆ ಎಚ್ಚರ ವಹಿಸುವುದು ಅವಶ್ಯಕ.

2008-09ರ ಸಂದರ್ಭದಲ್ಲಿ ಮಹಾನಗರದ ನಿರ್ಮಾಣ ಹಂತದ ಕಟ್ಟಡವೊಂದು (ಶ್ರೀ ಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕ ಹಾಗೂ ಹಂಪಿ ಉತ್ಸವದ ಸಂದರ್ಭ) ಏಕಾಏಕಿ ಕುಸಿದು ಬಿದ್ದಿತ್ತು. ಪರಿಣಾಮ ಹತ್ತಾರು ಮಂದಿ ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದರು. ಯಾವ ಕಟ್ಟಡಗಳೂ ಶಿಥಿಲಾವಸ್ಥೆಗೆ ಬಂದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಕೈ ಕಟ್ಟಿ ಕೂರುವುದು ಬೇಡ. ಮುಂದಾಗುವ ಅನಾಹುತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ ಎಂ.ವಿ.ತುಷಾರಮಣಿ

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿ, ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡ ನೆಲಸಮಗೊಳಿಸುವ ದೂರುಗಳು ಬಂದಿಲ್ಲ. ಒಂದು ವೇಳೆ ಅಂತಹ ಕಟ್ಟಡಗಳಿದ್ದರೆ ಅವುಗಳನ್ನು ಕೆಡವಲು ಅನುಮತಿ ಕಡ್ಡಾಯ. ಪಾಲಿಕೆ ಸಿಬ್ಬಂದಿ ಪ್ರತಿಯೊಂದು ವಾರ್ಡಿಗೂ ತೆರಳಿ ಶಿಥಿಲಗೊಂಡ ಕಟ್ಟಡಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. 10 ವರ್ಷದ ಹಿಂದೆ ನಡೆದಂತಹ ಆ ದುರ್ಘಟನೆ ಈವರೆಗೂ ಜರುಗದಿರುವುದು ಸಂತಸದ ಸಂಗತಿ ಎನ್ನುತ್ತಾರೆ ಆಯುಕ್ತೆ ತುಷಾರಮಣಿ.

ABOUT THE AUTHOR

...view details