ಹೊಸಪೇಟೆ (ವಿಜಯನಗರ) :ಆಟವಾಡುತ್ತಿದ್ದ ವೇಳೆ 11 ವರ್ಷದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾಳೆಮ್ಮಗುಡಿಯಲ್ಲಿ ನಡೆದಿದೆ.
ಕೃಷ್ಣ(11) ಎಂಬಾತ ಮೃತಪಟ್ಟ ಬಾಲಕ. ಸ್ನೇಹಿತ ಮನೆ ಅಂಗಳದಲ್ಲಿ ಬಾಲಕ ಆಟ ಆಡುವಾಗ ಈ ದುರ್ಘಟನೆ ನಡೆದಿದೆ. ಮೊಣಕಾಲಿಗೆ ವಿಷ ಸರ್ಪವೊಂದು ಕಚ್ಚಿದ್ದು, ಈ ವಿಷಯವನ್ನು ಬಾಲಕ ತನ್ನ ತಂದೆ ಹತ್ತಿರ ಹೇಳಿದ್ದಾನೆ.