ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷ

ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಪಾಪಿನಾಯಕಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ರಹಮತ್ ತರಿಕೆರೆ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರು ಆಮೆಯನ್ನು ಪಕ್ಕದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಹೊಸಪೇಟೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷ !

By

Published : Sep 19, 2019, 10:27 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಿಂದ ಪಾಪಿನಾಯಕಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷವಾಗಿದೆ.

ಕಮಲಾಪುರ ಗ್ರಾಮದ ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ‌ ಹೊಂದಿಕೊಂಡಿರುವ ರಸ್ತೆ‌ ಮಾರ್ಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ರಹಮತ್ ತರಿಕೆರೆ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರ ಕಣ್ಣಿಗೆ ಈ ಆಮೆ ಕಾಣಿಸಿಕೊಂಡಿದೆ‌. ಅವರಿಬ್ಬರೂ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿರುವ ಮಾರ್ಗ ಮಧ್ಯದಲ್ಲಿ ನಿಧಾನಗತಿಯಲ್ಲಿ ತೆವಳುತ್ತಾ ಸಾಗಿದ ಆ ಆಮೆಯನ್ನು‌ ಅವರು ಪಕ್ಕದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಈ ಆಮೆ ರಸ್ತೆಯಲ್ಲಿ ಸಂಚಾರ‌ ಮಾಡುವ ಇತರೆ ವಾಹನಗಳಿಗೆ ಆಹುತಿಯಾಗುವ ಸಂಭವಿತ್ತು. ಅದೃಷ್ಟವಶಾತ್ ನಮ್ಮ ಕಣ್ಣಿಗೆ ಕಾಣಿಸಿಕೊಂಡಿದೆ. ಇದೀಗ ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆಯೆಂದು ತಿಳಿಸಿದ್ದಾರೆ.

ABOUT THE AUTHOR

...view details