ಕರ್ನಾಟಕ

karnataka

ETV Bharat / state

ಲೈವ್​​​ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಖಾಸಗಿ ಕಂಪನಿ ಉದ್ಯೋಗಿ - ಮಹೇಶ್

ಹೊಸಪೇಟೆಯ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಲೈವ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೈವ್​ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು
ಲೈವ್​ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

By

Published : Aug 25, 2020, 8:58 AM IST

Updated : Mar 2, 2021, 12:53 PM IST

ಹೊಸಪೇಟೆ:ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ಲೈವ್​ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹೇಶ್​ (40) ಎಂಬ ಉದ್ಯೋಗಿ ಬ್ಯಾಂಕ್​ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌

ಈತ ನಗರದ ಶ್ರೀರಾಮುಲು ಉದ್ಯಾನವನದ ಬಳಿ ಇರುವ ಖಾಸಗಿ ಕಂಪೆನಿಯ ಸಿಬ್ಬಂದಿ ಎಂದು ಹೇಳಲಾಗುತ್ತಿದೆ. ಮೇಲಾಧಿಕಾರಿಗಳ ಕಿರುಕುಳ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಬ್ಯಾಂಕ್​ನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್​ಗೆ ಸರಿಯಾದ ದಾಖಲೆಗಳು ಇಲ್ಲದ್ದಿದ್ದರೂ ಗ್ರಾಹಕರಿಗೆ ಲೋನ್​ ನೀಡುವಂತೆ ಒತ್ತಡ ಹೇರಲಾಗಿತ್ತಂತೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಬ್ಯುಸಿನೆಸ್ ಇಲ್ಲದ ಕಾರಣ ಕೆಲಸಗಾರರ ಮೇಲೆ ಒತ್ತಡದ ತಂತ್ರ ಬ್ಯಾಂಕ್ ಹೇರಿದೆ ಎಂಬ ಆರೋಪ ಕೇಳಿ ಬಂದಿದೆ.‌

Last Updated : Mar 2, 2021, 12:53 PM IST

ABOUT THE AUTHOR

...view details