ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶನಿವಾರ ಮೂರನೇ ವಾರ್ಡ್ನಲ್ಲಿ ಕುಡಿಯುವ ನೀರಿನ ಕೊಳವೆಯಲ್ಲಿ ರಕ್ತ ಮತ್ತು ಮಾಂಸದ ತುಣಕು ಕಂಡು ಬಂದಿದ್ದು ಊರಿನ ಜನರು ಆಶ್ಚರ್ಯ ಚಕಿತರಾಗಿದ್ದಾರೆ .
ತೆಕ್ಕಲಕೋಟೆಯ 3ನೇ ವಾರ್ಡಿನ ಜಾಮಿಯಾ ಮಸೀದ್ ಹತ್ತಿರ ಇರುವ ವಠಾರದಲ್ಲಿ ಸಮಯ ಸುಮಾರು ಬೆಳಗ್ಗೆ 8 ಗಂಟೆಯ ವೇಳೆಗೆ ಕುಡಿಯುವ ನೀರು ಸರಬರಾಜು ಮಾಡಲಿಕ್ಕೆ ಅಳವಡಿಸಿರುವ ಕೆಲವೊಂದು ಕೊಳವೆಯಲ್ಲಿ ರಕ್ತದ ನೀರು ಹಾಗೂ ಮಾಂಸದ ತುಣುಕುಗಳು ಕಂಡು ಬಂದಿದ್ದು ಜನರು ಆಶ್ಚರ್ಯ ಚಕಿತರಾದರು.
ಘಟನಾ ಸುದ್ದಿ ತಿಳಿದ ನಂತರ ಸ್ಥಳಕ್ಕೆ ಭೇಟಿ ನೀಡಿದಾಗ ವಠಾರದ ಕಾಜಾ ಸಾಬ್, ಕಾಜ ಹುಸೇನ್, ಮೈಬು ಹಾಗೂ ಅಕ್ಕಪಕ್ಕದ ಮನೆಗಳ ಕೊಳೆವೆಯಲ್ಲಿ ನೀರಿನ ರಕ್ತದ ಕೋಡಿ ಹರಿದಿತ್ತು. ಈ ವಠಾರಕ್ಕೆ ಅದೇ ವಾರ್ಡ್ನಲ್ಲಿರುವ ನೀರಿನ ಸರಬರಾಜು ಒಂದರ ಟ್ಯಾಂಕನಲ್ಲಿ ವೀಕ್ಷಿಸಿದಾಗ ಯಾವುದೇ ರೀತಿಯಲ್ಲಿ ಸಂಶಯಾತ್ಮಕವಾಗಿ ಕಂಡು ಬಂದಿರುವುದಿಲ್ಲ. ನಂತರ ಪಟ್ಟಣ ಪಂಚಾಯಿತಿಯ ಸಿಒ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುವುದಾಗಿ ತಿಳಿಸಿದರು. ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗಪೂರ್, ನಾಜಿಮ್, ಹುಸೇನ್, ರಜಾಕ್, ಮೈನುದ್ದಿನ್, ಖಾಜಾ ಮೊಬೈಲ್ ಶಾಪ್, ಶರೀಫ್, ಮಹಿಳೆಯರಾದ ಶಕೀನಾ, ಶಾಯಿನ್, ಶಮಿಮ್, ಶಂಶಾದ್ ಮತ್ತು ವಾರ್ಡ್ನ ಪ್ರಮುಖರು ಇದ್ದರು.
ಇದನ್ನೂ ಓದಿ:ದೆಹಲಿ ಸಾರಿಗೆ ಬಸ್ ಅಪಘಾತ: ಒಬ್ಬ ಸಾವು, ಇಬ್ಬರಿಗೆ ಗಾಯ.. ಘಟನೆಯ ಭಯಾನಕ ದೃಶ್ಯ ಸೆರೆ