ಕರ್ನಾಟಕ

karnataka

ETV Bharat / state

ಹೊಸಪೇಟೆ: ಚಿಕಿತ್ಸೆ ಸಿಗದೆ ಎತ್ತು ಸಾವು - ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಚಿಕಿತ್ಸೆ ಸಿಗದೆ ಎತ್ತೊಂದು ಮೃತಪಪಟ್ಟಿದೆ.

A Ox died without treatment
ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ಎತ್ತು

By

Published : Mar 16, 2021, 2:33 PM IST

Updated : Mar 16, 2021, 7:01 PM IST

ಹೊಸಪೇಟೆ:ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಚಿಕಿತ್ಸೆ ಸಿಗದೆ ಎತ್ತೊಂದು ಮೃತಪಪಟ್ಟಿರುವ ಘಟನೆ ನಡೆದಿದೆ.

ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ಎತ್ತು

ಗ್ರಾಮದ ರೈತ ಮಡಿವಾಳರ ಮಾರಪ್ಪ ಎಂಬುವರಿಗೆ ಸೇರಿದ ಎತ್ತಿಗೆ ಸೋಮವಾರ ಬೆಳಗ್ಗೆಯಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು.‌ ರೈತ ಮಾರಪ್ಪ ಈ ಕುರಿತು ಪಶು ಆಸ್ಪತ್ರೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಆದರೆ, ಸಿಬ್ಬಂದಿ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಹೀಗಾಗಿ ಮನೆಗೆ ಆಧಾರವಾಗಿದ್ದ ಎತ್ತು ಮೃತಪಟ್ಟಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.

ಮೂರು ಪಶು ಆಸ್ಪತ್ರೆಗೆ ಒಬ್ಬರೇ ವೈದ್ಯರಿದ್ದು, ಹೀಗಾಗಿ ಪಶು ಆಸ್ಪತ್ರೆಯಲ್ಲಿ ಕಾಯಂ ಆಗಿ ವೈದ್ಯರು ಲಭ್ಯವಿರುವುದಿಲ್ಲ. ಕಾಂಪೌಂಡರ್​ ಮಾತ್ರ ಇದ್ದಾರೆ. ‌ಅವರು ಸಹ ಕೂಡಲೇ ಸ್ಪಂದಿಸುವುದಿಲ್ಲ. ಪಶು ಆಸ್ಪತ್ರೆ ಅವ್ಯವಸ್ಥೆಯನ್ನು ಅಧಿಕಾರಿಗಳು ಸರಿ‌ಪಡಿಸಬೇಕು. ಅಲ್ಲದೆ ಆಸ್ಪತ್ರೆಗೆ ಕಾಯಂ ವೈದ್ಯರನ್ನು‌ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Last Updated : Mar 16, 2021, 7:01 PM IST

ABOUT THE AUTHOR

...view details