ಹೊಸಪೇಟೆ(ವಿಜಯನಗರ):ನಾನು ಈಗಲೇ ಸತ್ತರೂ ಪರವಾಗಿಲ್ಲ, ನನಗೆ ಕೊರೊನಾ ಲಸಿಕೆ ಬೇಡ ಎಂದು ಅಜ್ಜಿ ಆರೋಗ್ಯ ಕಾರ್ಯಕರ್ತರಿಗೆ ಅವಾಜ್ ಹಾಕಿದ್ದಾಳೆ. ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಈ ಘಟನೆ ಜರುಗಿದೆ.
ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ... ! - ಹೊಸಪೇಟೆ ಇತ್ತೀಚಿನ ಸುದ್ದಿ
ಅಜ್ಜಿಯೊಬ್ಬಳು ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ಹಠ ಮಾಡುತ್ತಿದ್ದು, ಆಕೆಗೆ ಹೇಗಾದರೂ ಮಾಡಿ ಲಸಿಕೆ ಹಾಕಬೇಕು ಎಂದು ಆರೋಗ್ಯ ಕಾರ್ಯಕರ್ತರು ಗಂಟುಬಿದ್ದಿದ್ದಾರೆ. ಆದರೆ ಅಜ್ಜಿ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.
![ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ... ! A old woman denied taking vaccine](https://etvbharatimages.akamaized.net/etvbharat/prod-images/768-512-13010292-thumbnail-3x2-nin.jpg)
ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ
ನನಗೆ ಕೊರೊನಾ ಲಸಿಕೆ ಬೇಡ. ನೀವ್ಯಾಕೆ ಇಷ್ಟು ಜೋರು ಮಾಡುತ್ತಿದ್ದೀರಾ?. ನಾನು ಈಗಲೇ ಸತ್ತರೂ ಪರವಾಗಿಲ್ಲ ಕೊರೊನಾ ಲಸಿಕೆ ಬೇಡ ಎಂದು ಅಜ್ಜಿ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದಾಳೆ.
ನಾನು ಈಗಲೇ ಸತ್ತರೂ ಸರಿ ಕೊರೊನಾ ಲಸಿಕೆ ಬೇಡ... !
ನನಗೆ ಯಾರು ದಿಕ್ಕಿಲ್ಲ ನಾನು ಯಾರನ್ನೂ ನಂಬೋದಿಲ್ಲ. ಬೇಡ ಅಂದರು ಸಹ ಯಾಕೆ ಗಂಟು ಬಿದ್ದಿದ್ದಾರಾ? ನನ್ನ ಹೆಸರನ್ನೂ ಹೇಳೋಲ್ಲ, ಆಧಾರ್ ನಂಬರ್ನೂ ಹೇಳೋಲ್ಲ ಎಂದು ಅವಾಜ್ ಹಾಕಿ ಆರೋಗ್ಯ ಅಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ್ದಾಳೆ.