ಬಳ್ಳಾರಿ: ತಂದೆಯ ಪ್ರೀತಿ ಕಾಣದ 3 ವರ್ಷದ ಬಾಲಕಿಗೆ ತಾಯಿಯೇ ವಿಲನ್ ಆಗಿದ್ದಾಳೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರಿಯಕರನೊಂದಿಗೆ ಸೇರಿ ಬಾಲಕಿಯನ್ನು ಕೊಲ್ಲಲು ಯತ್ನಿಸಿದ್ದಲ್ಲದೆ, ಸಿಗರೇಟ್‌ನಿಂದ ಬಾಲಕಿಯ ಮೈ ಸೇರಿದಂತೆ ಗುಪ್ತಾಂಗವನ್ನು ಸುಟ್ಟಿರುವ ಅಮಾನವೀಯ ಘಟನೆ ಗಣಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಿರುಗುಪ್ಪ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ತಂದೆ ಇಲ್ಲದ ಮಗಳಿಗೆ ಆಸರೆಯಾಗಬೇಕಿದ್ದ ತಾಯಿ ಹೆತ್ತ ಮಗಳಿಗೆ ಆರೈಕೆ ಮಾಡದೆ ತನ್ನ ಮಗಳನ್ನೇ ದೂರ ತಳ್ಳಲು ಪ್ರಯತ್ನಿಸಿದ್ದಾಳೆ. ಪ್ರಿಯತಮನೊಂದಿಗೆ ಸೇರಿ ಬಾಲಕಿಯ ಗುಪ್ತಾಂಗ ಸೇರಿ ವಿವಿಧ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾಳೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.