ಬಳ್ಳಾರಿ: ನಗರದ ಟ್ರಾಮಾಕೇರ್ ಸೆಂಟರ್ ನಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೋಂಕಿತರು ತಮಗಾದ ತೊಂದರೆಗಳ ಕುರಿತು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇಲ್ಲಿನ ಟ್ರಾಮಾಕೇರ್ ಸೆಂಟರ್ ನಲ್ಲಿ ಸಮಯಕ್ಕೆ ಔಷಧಿ ಪೂರೈಕೆಯಾಗೊಲ್ಲ, ಸೀರಿಯಸ್ ಇದ್ದರೂ ಕೂಡ ವೈದ್ಯರು ಕ್ಯಾರೇ ಎನ್ನುತ್ತಿಲ್ಲ. ಈ ಆಸ್ಪತ್ರೆ ಗೆ ಬಂದು ಒಂದು ದಿನ ಆದರು ಊಟ ಬಿಟ್ಟು ಬೇರೆ ಏನನ್ನು ಕೊಡುತ್ತಿಲ್ಲ. ಟಾಯ್ಲೆಟ್ ನಲ್ಲೂ ನೀರಿಲ್ಲ, ಎಲ್ಲ ಸೋಂಕಿತರಿಗೂ ಒಂದೇ ಟಾಯ್ಲೆಟ್ ವ್ಯವಸ್ಥೆಯಿದೆ. ನ್ಯೂಮೋನಿಯಾ ಇದೆ ಟ್ಯಾಬ್ಲೆಟ್ ಕೊಡಿ ಎಂದರು ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.