ಕರ್ನಾಟಕ

karnataka

ETV Bharat / state

ವಿವಾಹೇತರ ಸಂಬಂಧ.. ಬೇರೊಬ್ಬನ ಜೊತೆಗೂ ಸಲುಗೆ, ಮಹಿಳೆ ಕೊಂದು ಹೂತಾಕಿದ ಆರೋಪಿ ಅರೆಸ್ಟ್​ - illegal relationship

ಕುಡತಿನಿ ಗ್ರಾಮದಲ್ಲಿ ಮಹಿಳೆ ಹತ್ಯೆ- ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಕೆಯನ್ನೇ ಕೊಂದು ಹೂತಾಕಿದ ಕಿರಾತಕ-ಆರೋಪಿ ಬಂಧನ

murder
ವಿವಾಹಿತ ಮಹಿಳೆ ಹತ್ಯೆ

By

Published : Dec 29, 2022, 7:29 AM IST

Updated : Dec 29, 2022, 12:28 PM IST

ಕುಡತಿನಿ ಪೊಲೀಸ್​ ಠಾಣಾ ವ್ಯಾಪ್ತಿಯ ದೃಶ್ಯ

ಬಳ್ಳಾರಿ: ತನ್ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಬೇರೆಯವರ ಜೊತೆಗೆ ಸಲುಗೆ ಬೆಳೆಸಿದ್ದನ್ನು ಸಹಿಸದೇ ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕುಡತಿನಿ ಗ್ರಾಮದಲ್ಲಿ ನಡೆದಿದೆ. ಭಾಗ್ಯಮ್ಮ (29) ಕೊಲೆಯಾದ ಮಹಿಳೆ. ಕಾಶಿಮಪ್ಪ (45) ಕೊಲೆ ಮಾಡಿದ ಆರೋಪಿ.

ಭಾಗ್ಯಮ್ಮ ತನ್ನ ಜತೆಯಲ್ಲದೇ ಬೇರೆಯವರೊಂದಿಗೆ ಸಹ ವಿವಾಹೇತರ ಸಂಬಂಧ ಹೊಂದಿರಬಹುದು ಎಂದು ಶಂಕಿಸಿದ ಕಾಶಿಮಪ್ಪ, ಇದೇ ತಿಂಗಳ 20 ರಂದು ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಕೈಗಾರಿಕಾ ಪ್ರದೇಶದಲ್ಲಿ ಶವ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್​ 20ರಂದು ಮಹಿಳೆಯನ್ನು ಮನೆಯಿಂದ ಕುಡಿತಿನಿ ಕೈಗಾರಿಕಾ ಪ್ರದೇಶದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಆರೋಪಿ, ಬಳಿಕ ಜಗಳ ತೆಗೆದು ಕೊಲೆ ಮಾಡಿದ್ದಾನೆ. ಮಹಿಳೆ ಕಾಣೆಯಾದ ಬಗ್ಗೆ ಮಹಿಳೆಯ ಅತ್ತೆ ಶಂಕರಮ್ಮ ಕುಡಿತಿನಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಕಾಶಿಮಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ತೋರಣಗಲ್ಲು ಡಿವೈಎಸ್‌ಪಿ ಎಸ್‌.ಎಸ್‌. ಕಾಶಿಗೌಡರ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್‌ ಚಂದನ್‌ ಗೋಪಾಲ್‌ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಪ್ರೇಯಸಿಯ ಕೊಲೆ ಮಾಡಿ ತಾನೂ ವಿಷ ಸೇವಿಸಿ ಪ್ರಾಣಬಿಟ್ಟ!

Last Updated : Dec 29, 2022, 12:28 PM IST

ABOUT THE AUTHOR

...view details