ಕರ್ನಾಟಕ

karnataka

ETV Bharat / state

ಮತದಾನಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ಅಭ್ಯರ್ಥಿ ಗೆಲುವು..! - ಬಳ್ಳಾರಿಯಲ್ಲಿ ಚುನಾವಣಾ ಫಲಿತಾಂಶ

ಚುನಾವಣೆಗೆ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಕಂಡು ಅಚ್ಚರಿಗೆ ಕಾರಣರಾಗಿದ್ದಾರೆ.

a-man-who-committed-suicide-won-the-election
ಮತದಾನಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಗೆಲುವು

By

Published : Dec 31, 2020, 2:35 AM IST

Updated : Dec 31, 2020, 5:49 AM IST

ಹೊಸಪೇಟೆ (ಬಳ್ಳಾರಿ) : ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾನಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.

ಹಗರಿ ಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಮೃತ ವ್ಯಕ್ತಿ ಮಲಿಯಪ್ಪ(40) 448 ಮತ ಪಡೆದು, ಸುಮಾರು 286 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಇದನ್ನೂ ಓದಿ:ಕೊಪ್ಪಳದಲ್ಲಿ ಪಂಚಾಯಿತಿ ಚುನಾವಣೆ ಗೆದ್ದು ಬೀಗಿದ ದಂಪತಿ

ಮಲಿಯಪ್ಪ ಜೀವನದಲ್ಲಿ ಜಿಗುಪ್ಸೆಯಾಗಿ ಡಿಸೆಂಬರ್​​​ 24ರಂದು ತಮ್ಮ ಗ್ರಾಮದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅಚ್ಚರಿ ಮೂಡಿಸಿದೆ.

Last Updated : Dec 31, 2020, 5:49 AM IST

ABOUT THE AUTHOR

...view details