ಬಳ್ಳಾರಿ: ನಗರದ ಹೊರವಲಯದಲ್ಲಿರುವ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಏಸ್ ತೊಳೆಯಲು ಹೋದ ವ್ಯಕ್ತಿ ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ವಾಹನ ಸಮೇತ ನೀರಿನಲ್ಲಿ ಮುಳುಗಿ ವೃದ್ಧ ಸಾವು - man death in water with TATA ACE in bellary
ಟಾಟಾ ಏಸ್ ತೊಳೆಯಲು ತುಂಗಭದ್ರಾ ಬಲದಂಡೆಗೆ ತೆರಳಿದ್ದ ವೃದ್ಧನೋರ್ವ ವಾಹನ ಸಮೇತ ನೀರನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
![ವಾಹನ ಸಮೇತ ನೀರಿನಲ್ಲಿ ಮುಳುಗಿ ವೃದ್ಧ ಸಾವು](https://etvbharatimages.akamaized.net/etvbharat/prod-images/768-512-5007697-thumbnail-3x2-vicky.jpg)
ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು
ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು
ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಟಾಟಾ ಏಸ್ ಮತ್ತು ವ್ಯಕ್ತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.