ಬಳ್ಳಾರಿ:ವಿಷಜಂತು ಕಚ್ಚಿದ ಪರಿಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದಿದೆ.
ಬಹಿರ್ದೆಸೆಗೆ ತೆರಳಿದ್ದ ವೇಳೆ ಕಚ್ಚಿದ ವಿಷಜಂತು: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಸಾವು - bellary latest crime news
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ವಿಷಜಂತು ಕಚ್ಚಿದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ್ದಾನೆ.
ವಿಷಜಂತು ಕಚ್ಚಿ ಯುವಕ ಸಾವು
ಅನಿಲ್ (22) ಮೃತ ಯುವಕ. ರಾತ್ರಿ ವೇಳೆ ಬಹಿರ್ದೆಸೆಗೆ ತೆರಳಿದ್ದ ವೇಳೆ ವಿಷಜಂತುವೊಂದು ಕಚ್ಚಿದೆ. ಅನಿಲ್ ಮನೆಗೆ ಬಂದು ಮಲಗಿದ್ದ ವೇಳೆ ಬಾಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿದ ಪೋಷಕರು ಅನುಮಾನಗೊಂಡು ಆಸ್ಪತ್ರೆಗೆ ಕರೆ ತರುವ ವೇಳೆ ಮಾರ್ಗಮಧ್ಯದಲ್ಲೇ ಅನಿಲ್ ಕೊನೆಯುಸಿರೆಳೆದಿದ್ದಾನೆ.
ಯಾವುದೋ ವಿಷಜಂತು ಕಚ್ಚಿದ್ದರಿಂದ ಈ ಅವಘಡ ನಡೆದಿದೆ ಎಂದು ಮೋಕಾ ಠಾಣೆಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.