ಬಳ್ಳಾರಿ: ಅನಾರೋಗ್ಯಕ್ಕೆ ತುತ್ತಾಗಿ ಪತ್ನಿ ಸಾವನ್ನಪ್ಪಿದ್ದಕ್ಕೆ ಮನ ನೊಂದು ಪತಿ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲವೆಗೆ ಹಾರಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಬಳ್ಳಾರಿ: ಪತ್ನಿ ಅಗಲಿಕೆಯಿಂದ ಮನ ನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪತಿ! - Bellary Rural Police Station
ಘಟನೆಯಲ್ಲಿ ತಂದೆ ಹಾಗೂ ಕಿರಿಯ ಮಗಳು ಸಾವನ್ನಪ್ಪಿದರೆ, ಅದೃಷ್ಟವಶಾತ್ ಹಿರಿಯ ಮಗಳು ಬದುಕುಳಿದಿದ್ದಾಳೆ. ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ತಂದೆ ಗಣೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನೆಯಲ್ಲಿ ತಂದೆ ಹಾಗೂ ಕಿರಿಯ ಮಗಳು ಸಾವನ್ನಪ್ಪಿದರೆ, ಪವಾಡವೆಂಬಂತೆ ಹಿರಿಯ ಮಗಳು ಬದುಕುಳಿದಿದ್ದಾಳೆ. ಇಲ್ಲಿನ ಹಲಕುಂದಿ ಗ್ರಾಮದ ಬಳಿಯ ಮುಂಡರಗಿ ಡ್ರಾಪ್ನ ಹೆಚ್ಎಲ್ಸಿ ಬಳಿ ಘಟನೆ ನಡೆದಿದೆ. ಬೆಂಗಳೂರು ರಸ್ತೆಯಲ್ಲಿರುವ ಖಬರ್ಸ್ತಾನ್ ಎದುರಿನ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಆಚಾರಿ ತನ್ನಿಬ್ಬರು ಮಕ್ಕಳೊಂದಿಗೆ ಇಲ್ಲಿನ ಹೆಚ್ಎಲ್ಸಿ ಉಪ ಕಾಲುವೆಗೆ ಹಾರಿದ್ದಾರೆ.
ಘಟನೆಯಲ್ಲಿ 12 ವರ್ಷದ ಪುತ್ರಿ ಸ್ಫೂರ್ತಿ ಹಾಗೂ ತಂದೆ ಗಣೇಶ್ ಜಲಸಮಾಧಿಯಾದರೆ, ಇನ್ನೊಬ್ಬ ಮಗಳನ್ನು ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನು ಪುತ್ರಿ ಸ್ಫೂರ್ತಿ ಮೃತದೇಹ ಪತ್ತೆಯಾಗಿದ್ದು, ಗಣೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.