ಹೊಸಪೇಟೆ: ನಗರ ನಿವಾಸಿಗಳ ನಿದ್ದೆಗೆಡಿಸಿದ್ದ ಕಳ್ಳರನ್ನು ನಗರದ ಬಡಾವಣೆ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ₹ 6 ಲಕ್ಷಕ್ಕೂ ಅಧಿಕ ಬೆಲೆ ಬಾಳುವ, 160 ಗ್ರಾಂ ಬಂಗಾರವನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.ತಾಲೂಕಿನಲ್ಲಿ ಎರಡು ತಿಂಗಳನಿಂದ ಐದು ಜನರ ಕಳ್ಳರ ಗುಂಪು ಸಕ್ರಿಯವಾಗಿತ್ತು. ಹೊಸಪೇಟೆಯ ಪ್ರಮುಖ ಕಾಲೋನಿಗಳನ್ನು ಟಾರ್ಗೆಟ್ ಮಾಡಿ, ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದರು. ಎಂಜೆನಗರ, ಚಪ್ಪರದಹಳ್ಳಿ, ನೆಹರು ಕಾಲೋನಿ, ಮತ್ತು ಜೆಪಿನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದರು ಎಂದು ಡಿವೈಎಸ್ಪಿ ರಘುಕುಮಾರ ಈಟಿವಿ ಭಾರತಕ್ಕೆ ತಿಳಿಸಿದರು.