ಬಳ್ಳಾರಿ:ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಗುಂಡ್ಲವದ್ದಿಗೇರಿಯ ತಿಮ್ಮಾರೆಡ್ಡಿ ಕುಟುಂಬಕ್ಕೆಜಿಲ್ಲಾ ಉಸ್ತುವಾರಿ ಸಚಿವರಾಗಿರುವಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ 5 ಲಕ್ಷ ರೂ.ಗಳ ಪರಿಹಾರದ ಚೆಕ್ನ್ನು ವಿತರಿಸಿದ್ದಾರೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಪರಿಹಾರ ವಿತರಿಸಿದ ಡಿಸಿಎಂ ಸವದಿ - ಡಿಸಿಎಂ ಸವದಿಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಚೆಕ್ ವಿತರಣೆ
ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಗುಂಡ್ಲವದ್ದಿಗೇರಿಯ ತಿಮ್ಮಾರೆಡ್ಡಿ ಕುಟುಂಬಕ್ಕೆ ಡಿಸಿಎಂ ಸವದಿ 5 ಲಕ್ಷ ರೂ.ಗಳ ಪರಿಹಾರದ ಚೆಕ್ನ್ನ ವಿತರಿಸಿದ್ದಾರೆ.
![ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಪರಿಹಾರ ವಿತರಿಸಿದ ಡಿಸಿಎಂ ಸವದಿ A-farmer-who-commits-suicide-by-debt-relief-distributed-by-laxman-savadi](https://etvbharatimages.akamaized.net/etvbharat/prod-images/768-512-5602474-thumbnail-3x2-sanju.jpg)
ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಪರಿಹಾರ ವಿತರಿಸಿದ ಸವದಿ...
ರೈತ ಶಿವಶಂಕರಪ್ಪರ ಮಗ ಜೆ.ತಿಮ್ಮಾರೆಡ್ಡಿ ಅವರು ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಅವರ ಧರ್ಮಪತ್ನಿ ಸುಧಾ ಹಾಗೂ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನ್ನು ಇಂದು ಡಿಸಿಎಂ ವಿತರಿಸಿದರು. ಇದೇ ವೇಳೆ ರೈತ ತಿಮ್ಮಾರೆಡ್ಡಿ ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವರು ಸರ್ಕಾರ ತಮ್ಮೊಂದಿಗೆ ಇದೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.