ಕರ್ನಾಟಕ

karnataka

ETV Bharat / state

ಕಲ್ಲುಗಳ ಮೇಲೆ ಅಮೃತವಾಣಿ, ಪಕ್ಷಿಗಳಿಗೆ ಆಹಾರ... ಪಾರ್ಕ್​ ಅಲ್ಲ, ಇದು ಆರಕ್ಷಕ ಠಾಣೆ! - ಕಮಲಾಪುರ ಪೊಲೀಸ್ ಠಾಣೆ ಸುದ್ದಿ

ಠಾಣೆಗೆ ಯಾರೇ ಬಂದರೂ ತಮ್ಮತ್ತ ಆ ಬಂಡೆಗಲ್ಲುಗಳು ಗಮನ ಸೆಳೆಯುತ್ತವೆ. ಅಲ್ಲದೆ ವಿವಿಧ ಸಸಿಗಳು, ಪಕ್ಷಿಗಳಿಗೆ ಕಾಳು ಮತ್ತು ನೀರಿನ ವ್ಯವಸ್ಥೆ ಮಾಡಿರುವವರು ಇಲ್ಲಿನ ಅಧಿಕಾರಿ ಪಿಎಸ್ಐ ವೈ. ಶಶಿಧರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Bellary
ಕಮಲಾಪುರ ಪೊಲೀಸ್ ಠಾಣೆ

By

Published : Aug 17, 2020, 7:44 PM IST

ಬಳ್ಳಾರಿ:ಕಲ್ಲುಬಂಡೆಗಳ ಮೇಲೆ ಅಮೃತವಾಣಿ ಫಲಕ, ವಿವಿಧ ಜಾತಿಯ ಸಸಿಗಳು, ಪಕ್ಷಿಗಳಿಗೆ ಕಾಳು-ನೀರು... ಈ ಎಲ್ಲಾ ದೃಶ್ಯಾವಳಿಗಳು ಕಂಡು ಬಂದಿದ್ದು ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಆವರಣದಲ್ಲಿ.

ಕಮಲಾಪುರ ಪೊಲೀಸ್ ಠಾಣೆಯ ಆವರಣ

ತಪ್ಪು ಮಾಡಿದವರು ಪೊಲೀಸ್ ಠಾಣೆಗೆ ಬರುತ್ತಿರುತ್ತಾರೆ. ಇಲ್ಲಿ ಮಹನೀಯರ ಅಮೃತವಾಣಿ ಓದಿಯಾದರೂ ಅವರಲ್ಲಿ ಸ್ವಲ್ಪ ಬದಲಾವಣೆ ಬಂದರೆ ಸಾಕು ಎನ್ನುವ ಉದ್ದೇಶದಿಂದ ಈ ಕೆಲಸವನ್ನು ಮಾಡಿಸಿರುವೆ ಎನ್ನುತ್ತಾರೆ ಪಿಎಸ್ಐ ವೈ. ಶಶಿಧರ್.

ಹೊಸಪೇಟೆಯ ಕಮಲಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಅಮೃತವಾಣಿಯುಳ್ಳ ಕಲ್ಲಿನ ಫಲಕಗಳು, ವಿವಿಧ ಸಸಿಗಳು, ಪಕ್ಷಿಗಳಿಗೆ ಕಾಳು ಮತ್ತು ನೀರಿನ ವ್ಯವಸ್ಥೆ ಮಾಡಿದ ಅಧಿಕಾರಿ ಪಿಎಸ್ಐ ವೈ. ಶಶಿಧರ್ ಅವರು ಎರಡು ಅಡಿ ವೃತ್ತಾಕಾರದ ಗೋಡೆಗಳನ್ನು ನಿರ್ಮಾಣ ಮಾಡಿ ಅದರ ಮೇಲೆ ಬಂಡೆಕಲ್ಲುಗಳಿಗೆ ಸುಂದರ ಆಕೃತಿ ಕೊಟ್ಟು ನಿಲ್ಲಿಸಿರುವುದು ವಿಶೇಷವಾಗಿದೆ.

ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ವೈ. ಶಶಿಧರ್

ಠಾಣೆಗೆ ಯಾರೇ ಬಂದರೂ ಬಂಡೆಗಲ್ಲುಗಳು ಗಮನ ಸೆಳೆಯುತ್ತವೆ. ಈ ಬಂಡೆಗಲ್ಲಿನ ಮೇಲೆ ಬುದ್ಧನ ವಾಣಿ, ಕುರಾನ್ ವಾಣಿ ಹಾಗೂ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅವರ ವಾಣಿಯನ್ನು ಸಹ ಬರೆಯಿಸಲಾಗಿದೆ ಎಂದು ತಿಳಿಸಿದರು.

ಒಂಬತ್ತು ತಿಂಗಳ ಹಿಂದೆ ಠಾಣೆಗೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಆಗಿ ಬಂದಿರುವ ವೈ. ಶಶಿಧರ್ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಕಮಲಾಪುರ ಪಟ್ಟಣದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಪಟ್ಟಣದಲ್ಲಿ ಪರಿಸರ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಕಮಲಾಪುರದ ಪಟ್ಟಣದಲ್ಲಿ ತುಂಗಭದ್ರ ಡ್ಯಾಂ ನಿರ್ಮಾಣ ಮಾಡಲು ಬಂದ ತಮಿಳುನಾಡಿನ ಸಮುದಾಯದವರು ಈ ಬಂಡೆಗಲ್ಲುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.

ABOUT THE AUTHOR

...view details