ಬಳ್ಳಾರಿ: ರಾಜ್ಯದಲ್ಲಿಎರಡನೇ ಹಂತದ ಲಾಕ್ಡೌನ್ ಮುಂದುವರೆದಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಮನೆಯಲ್ಲೆ ಕುಟುಂಬಸ್ಥರ ಸಮ್ಮುಖದಲ್ಲಿ ಜೋಡಿಯೊಂದು ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದೆ.
ಸಂಗ್ರಾಮ್ ನಾಯಕ್ ಮತ್ತು ಅಕ್ಷತಾ ಅವರ ಮದುವೆಯನ್ನು ಅದ್ದೂರಿಯಾಗಿ ಸಂಬಂಧಿಕರು ಹಾಗೂ ಊರಿನವರ ಮುಂದೆ ನಡೆಸಲು ನಿಶ್ಚಯಿಸಿಲಾಗಿತ್ತು. ಆದರೆ ಇಡೀ ಭೂ ಮಂಡಲವನ್ನು ನಿದ್ದೆಗೆಡಿಸಿರುವ ಕೊರೊನಾ ಹಿನ್ನೆಲೆ ತಮ್ಮ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದರೆ.
ಬಳ್ಳಾರಿ: ಲಾಕ್ಡೌನ್ ನಡುವೆ ಸಿಂಪಲ್ ಆಗಿ ವೆಡ್ಲಾಕ್ ಆದ ಜೋಡಿ - corona lock down
ಕೊರೊನಾ ಲಾಕ್ಡೌನ್ ನಡುವೆ ಬಳ್ಳಾರಿಯಲ್ಲಿ ಜೋಡಿಯೊಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
![ಬಳ್ಳಾರಿ: ಲಾಕ್ಡೌನ್ ನಡುವೆ ಸಿಂಪಲ್ ಆಗಿ ವೆಡ್ಲಾಕ್ ಆದ ಜೋಡಿ corona lock down](https://etvbharatimages.akamaized.net/etvbharat/prod-images/768-512-6850150-876-6850150-1587264172274.jpg)
ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ವಿಶೇಷವೆಂದರೆ ಮಧುಮಗ ಮಾಸ್ಕ್ ಹಾಕಿಕೊಂಡು ತಾಳಿ ಕಟ್ಟಿದ್ದಾನೆ. ಈ ಸಂದರ್ಭದಲ್ಲಿ ಮನೆ ಮಂದಿ ಮಾಸ್ಕ್ ಧರಿಸಿಕೊಂಡೇ ಮದುವೆಯಲ್ಲಿ ಭಾಗಿಯಾಗಿದ್ದು ಎಲ್ಲರಿಗೂ ಮಾದರಿಯಾಗಿದೆ.