ಬಳ್ಳಾರಿ:ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಒಬ್ಬ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಬೈರದೇವರಗುಡ್ಡದ ಪರುಶುರಾಮ (27) ಮೃತಪಟ್ಟಿದ್ದಾರೆ. ಕೊಟ್ಟೂರಿನಿಂದ ಸ್ವಗ್ರಾಮಕ್ಕೆ ಮರಳುವಾಗ ಅದೇ ಗ್ರಾಮದ ರವಿ ಎಂಬುವವರ ಬೈಕ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.