ಕರ್ನಾಟಕ

karnataka

ETV Bharat / state

ಬಳ್ಳಾರಿ: ಉಪಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆ

ಹೆಚ್ ಎಲ್ ಸಿ 14ನೇ ಡಿಪಿಯ ಉಪಕಾಲುವೆ ಬಳಿ ಬಯಲು ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದ. ನಿನ್ನೆ ಮೃತದೇಹ ಪತ್ತೆಯಾಗಿದೆ.

A boy dead body found in canal
ಉಪಕಾಲುಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆ

By

Published : Sep 27, 2020, 7:48 AM IST

ಬಳ್ಳಾರಿ: ಇಲ್ಲಿನ ಕೊಳಗಲ್ಲು ರಸ್ತೆ ಬಳಿಯ ಉಪಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಶನಿವಾರ ತಡರಾತ್ರಿ ಪತ್ತೆಯಾಗಿದೆ.

ಬಳ್ಳಾರಿಯ ಶಾಂತಿ ನಗರದ ಜಗದೀಶ್​ (7) ಮೃತ ಬಾಲಕ. ಹೆಚ್ ಎಲ್ ಸಿ 14ನೇ ಡಿಪಿಯ ಉಪಕಾಲುವೆ ಬಳಿ ಬಯಲು ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ನೀರಿನೊಳಗೆ ಕೊಚ್ಚಿ ಹೋಗಿದ್ದ.

ಬಾಲಕನ ಮೃತದೇಹವನ್ನ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details