ಕರ್ನಾಟಕ

karnataka

ETV Bharat / state

ಪತ್ನಿ-ಪ್ರಿಯಕರನನ್ನು ಕೊಂದ ಪ್ರಕರಣ: ಕೂಡ್ಲಿಗಿ ಠಾಣೆಗೆ ಬಂದು ಶರಣಾದ ಆರೋಪಿ - ಸಂಡೂರು ತಾಲೂಕಿನ ಇರಾಳ್ ಗ್ರಾಮ

ಸಂಡೂರು ತಾಲೂಕಿನ ಇರಾಳ್ ಗ್ರಾಮದಲ್ಲಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಇಂದು ಕೂಡ್ಲಿಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಸಿಪಿಐ ವಸಂತ ವಿ. ಅಸೂದೆ ತಿಳಿಸಿದ್ದಾರೆ.

a-accused-surrendered-in-kudligi-police-station
ಕೂಡ್ಲಿಗಿ ಠಾಣೆಗೆ ಬಂದು ಶರಾಣಾದ ಆರೋಪಿ

By

Published : Feb 3, 2021, 7:16 PM IST

ಹೊಸಪೇಟೆ (ಬಳ್ಳಾರಿ):ವಿವಾಹೇತರ ಸಂಬಂಧ ವಿಚಾರವಾಗಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪಿ ಕೂಡ್ಲಿಗಿ ಪೊಲೀಸ್​​ ಠಾಣೆಗೆ ಬಂದು ಶರಣಾಗಿದ್ದಾನೆ.

ಜಿಲ್ಲೆಯ ಸಂಡೂರು ತಾಲೂಕಿನ ಇರಾಳ್ ಗ್ರಾಮದ ತಬಸಮ್ (28) ಹಾಗೂ ಆಕೆಯ ಪ್ರಿಯಕರ ಫಯಾಜ್ ಅಹಮದ್ (26) ಕೊಲೆಯಾಗಿರುವವರು. ತಬಸಮ್ ಗಂಡ ಜಹಾಂಗೀರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಓದಿ:ವಿವಾಹೇತರ ಸಂಬಂಧ: ಪತ್ನಿ-ಪ್ರಿಯಕರನನ್ನು ಕೊಂದ ಪತಿ!

ಇಂದು ಕೂಡ್ಲಿಗಿ ಪೊಲೀಸ್ ಠಾಣೆಗೆ ಬಂದ ಆರೋಪಿ ಜಹಾಂಗೀರ್, ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ತಾನೇ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆತನನ್ನು ಬಂಧಿಸಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಪಿಐ ವಸಂತ ವಿ. ಅಸೂದೆ ತಿಳಿಸಿದ್ದಾರೆ.

ABOUT THE AUTHOR

...view details