ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 990 ಕೋವಿಡ್ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. 13 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 54,921ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 766ಕ್ಕೆ ತಲುಪಿದೆ.
ಬಳ್ಳಾರಿ-ವಿಜಯನಗರದಲ್ಲಿ 13 ಕೋವಿಡ್ ಸೋಂಕಿತರು ಸಾವು - ಬಳ್ಳಾರಿ-ವಿಜಯನಗರದಲ್ಲಿ 13 ಕೋವಿಡ್ ಸೋಂಕಿತರು ಸಾವು
ಉಭಯ ಜಿಲ್ಲೆಗಳಲ್ಲಿ ಸೋಮವಾರ 990 ಜನರಿಗೆ ಸೋಂಕು ದೃಢಪಟ್ಟಿದ್ದು, 13 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಬಳ್ಳಾರಿ-ವಿಜಯನಗರದಲ್ಲಿ 13 ಕೋವಿಡ್ ಸೋಂಕಿತರು ಸಾವು
ಇಂದು 515 ಜನರು ಡಿಸ್ಚಾರ್ಜ್ ಆಗಿದ್ದು, 10,766 ಸಕ್ರಿಯ ಪ್ರಕರಣಗಳಿವೆ. ಬಳ್ಳಾರಿ-438, ಸಂಡೂರು-138, ಸಿರುಗುಪ್ಪ-80 , ಹೊಸಪೇಟೆ- 86, ಎಚ್.ಬಿ.ಹಳ್ಳಿ-49, ಹರಪನಹಳ್ಳಿ-41, ಹಡಗಲಿ-26, ಕೂಡ್ಲಿಗಿ - 132, ಸೋಂಕಿತರು ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ