ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶನಿವಾರ 940 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಕೋವಿಡ್ ಸೋಂಕಿತರ ಸಂಖ್ಯೆ 44,477ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಕೊರೊನಾಗೆ 631 ಜನ ಬಲಿಯಾಗಿದ್ದಾರೆ. ಈವರೆಗೆ 39,974 ಜನರು ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ 3,872 ಸಕ್ರಿಯ ಪ್ರಕರಣಗಳಿವೆ.