ಬಳ್ಳಾರಿ :ಏ.6ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಬಳ್ಳಾರಿ ಜಿಲ್ಲೆಯಿಂದ 900 ಜನ ಗೃಹರಕ್ಷಕ ಸಿಬ್ಬಂದಿಯನ್ನು ಜಿಲ್ಲಾ ಕ್ರೀಡಾಂಗಣದಿಂದ ಕಳುಹಿಸಲಾಯಿತು.
ತಮಿಳುನಾಡು ಚುನಾವಣಾ ಕರ್ತವ್ಯಕ್ಕೆ ಬಳ್ಳಾರಿಯಿಂದ 900 ಜನ ಗೃಹರಕ್ಷಕ ಸಿಬ್ಬಂದಿ - guards from Bellary for Tamil Nadu
ಏ.6ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಬಳ್ಳಾರಿ ಜಿಲ್ಲೆಯಿಂದ 900 ಜನ ಗೃಹರಕ್ಷಕ ಸಿಬ್ಬಂದಿಯನ್ನು ಜಿಲ್ಲಾ ಕ್ರೀಡಾಂಗಣದಿಂದ ಕಳುಹಿಸಿಕೊಡಲಾಯಿತು.
ಗೃಹರಕ್ಷಕ ಸಿಬ್ಬಂದಿ
ಡಿಜಿಪಿ ಮತ್ತು ಹೋಂ ಗಾರ್ಡ್ಸ್ನ ಕಮಾಂಡೆಂಟ್ ಜನರಲ್ ಆದೇಶದ ಮೇರೆಗೆ ಬಳ್ಳಾರಿ ಜಿಲ್ಲೆಯ ವಿವಿಧ ಘಟಕಗಳಿಂದ 900 ಜನ ಗೃಹ ರಕ್ಷಕರು ಆಗಮಿಸಿದ್ದರು. ಬಳಿಕ ಇಲ್ಲಿಂದ ತಮಿಳುನಾಡು ರಾಜ್ಯದ ಮಧುರೈ ನಗರಕ್ಕೆ 250 ಜನ ಮತ್ತು ಸೇಲಂ ಜಿಲ್ಲೆಗೆ 650 ಜನ ಗೃಹರಕ್ಷಕ ಸಿಬ್ಬಂದಿಯನ್ನು ಕಳಿಸಲಾಯಿತು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ. ಷಕೀಬ್ ಅವರು, ಗೃಹರಕ್ಷಕ ಸಿಬ್ಬಂದಿಗೆ ಚುನಾವಣೆ ವೇಳೆ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.