ಹೊಸಪೇಟೆ:ಮೂರು ದಿನದ ಸಾರಿಗೆ ನೌಕರ ಮುಷ್ಕರದಿಂದ ಎನ್ಇಕೆಎಸ್ಆರ್ಟಿಸಿ ವಿಭಾಗಕ್ಕೆ 86 ಲಕ್ಷ ರೂ. ನಷ್ಟವಾಗಿದೆ ಎಂದು ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಹೇಳಿದರು.
ನಗರದ ಬಸ್ ನಿಲ್ದಾಣ ಕಚೇರಿಯಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಡಿ.11 ರಂದು 16 ಲಕ್ಷ ರೂ., 12 ರಂದು 30 ಲಕ್ಷ ರೂ., 13 ರಂದು 40 ರೂ. ನಷ್ಟವಾಗಿದೆ. ಒಂದು ದಿನಕ್ಕೆ 46 ಲಕ್ಷ ರೂ. ಸರಾಸರಿ ಆದಾಯ ವಿಭಾಗಕ್ಕೆ ಬರುತ್ತದೆ ಎಂದು ಮಾಹಿತಿ ನೀಡಿದರು.