ಕರ್ನಾಟಕ

karnataka

ETV Bharat / state

ಜಿಂದಾಲ್​​ನಲ್ಲಿ 86 ಕೊರೊನಾ ಪಾಸಿಟಿವ್ ಕೇಸ್​ ಪತ್ತೆ: ನೌಕರರಿಗೆ 7 ದಿನ ರಜೆ ಘೋಷಣೆ - DC S.S. Nakul clarified

ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದೆ. ಇಲ್ಲಿಯವರೆಗೆ ಈ ಕಾರ್ಖಾನೆಯೊಂದರಲ್ಲೇ 86 ಕೇಸ್​ಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ನಕುಲ್​ ತಿಳಿಸಿದ್ದಾರೆ.

dc-ss-nakul
ಡಿಸಿ ಎಸ್.ಎಸ್. ನಕುಲ್

By

Published : Jun 11, 2020, 3:01 PM IST

ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್​ನಲ್ಲಿರುವ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಹೊಸದಾಗಿ 43 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಕಾರ್ಖಾನೆಯೊಂದರಲ್ಲೇ ಈವರೆಗೆ 86 ಪ್ರಕರಣಗಳು ಕಂಡುಬಂದಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಜಿಂದಾಲ್​ನ ಕೊರೆಕ್ಸ್ ಹಾಗೂ ಒಪಿಜೆ ಸೆಂಟರ್​ನ ಎರಡೂ ಘಟಕಗಳಲ್ಲಿ ನೌಕರರಿಗೆ ಮುಂದಿನ ಏಳು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಈ ಅವಧಿ ಮುಗಿದ ನಂತರ ಅವರ ಸ್ವ್ಯಾಬ್ ಟೆಸ್ಟ್ ಮಾಡಲಾಗುವುದು. ಆ ವರದಿ ಆಧಾರದ ಮೇಲೆ ಆ ನೌಕರರನ್ನ ಕೆಲಸ ಮಾಡಿಸುವುದೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಉಳಿದಂತೆ ವರ್ಕ್ ಫ್ರಮ್ ಹೋಂ ಪದ್ಧತಿಯನ್ನೂ ಕೂಡ ಜಾರಿಗೆ ತರಲು ಜಿಂದಾಲ್ ಉಕ್ಕು ಕಾರ್ಖಾನೆಯ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದು, ಇಲ್ಲಿಯವರೆಗೆ ಈ ಕಾರ್ಖಾನೆಯೊಂದರಲ್ಲೇ 86 ಕೇಸ್​ಗಳು ಪತ್ತೆಯಾಗಿವೆ.

ABOUT THE AUTHOR

...view details