ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ 8 ಜನರು ಗುಣಮುಖ: ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ - ಬಳ್ಳಾರಿಯಲ್ಲಿ 8 ಜನರು ಗುಣಮುಖ

ಬಳ್ಳಾರಿಯಲ್ಲಿ ಇಂದು 8 ಜನ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಶಸ್ತ್ರ ಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಗುಣಮುಖರಾದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

Bellary
ಬಳ್ಳಾರಿಯಲ್ಲಿ 8 ಜನರು ಗುಣಮುಖ: ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್

By

Published : Jun 18, 2020, 11:27 PM IST

ಬಳ್ಳಾರಿ:ಜಿಲ್ಲೆಯಲ್ಲಿ ಇಂದು 8 ಜನ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಮೂಲಕ ಒಟ್ಟು 100 ಜನರು ಗುಣಮುಖರಾಗಿ ಬಿಡುಗಡೆಯಾದಂತಾಗಿದೆ.


ಪಿ- 6419, 34 ವರ್ಷದ ಪುರುಷ ಗಾಂಧಿ ನಗರ, ಪಿ- 6420 59 ವರ್ಷದ ಪುರುಷ ಎಚ್​ಸಿಡಬ್ಲೂ ಜಿಲ್ಲಾಸ್ಪತ್ರೆ, ಪಿ-6435, 31 ವರ್ಷದ ಪುರುಷ, ಪಿ- 6438 29 ವರ್ಷದ ಪುರುಷ ಸಿರಗುಪ್ಪ, ಪಿ- 6460, 29 ವರ್ಷದ ಪುರುಷ ತಾಳೂರು, ಪಿ- 6465, 42 ವರ್ಷದ ಪುರುಷ ಶಂಕರಗುಡ್ಡ ತೋರಣಗಲ್ಲು, ಪಿ-6493, 42 ವರ್ಷದ ಪುರುಷ ನಾಗಲಾಪುರದ ಸಂಡೂರು ಹಾಗೂ ಪಿ- 6505, 46 ವರ್ಷದ ಪುರುಷ ತಾಳೂರು ಗುಣಮುಖರಾದವರು.

ಶಸ್ತ್ರ ಚಿಕಿತ್ಸಕ ಡಾ. ಎನ್. ಬಸರೆಡ್ಡಿ ಅವರು ಗುಣಮುಖರಾದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಅಲ್ಲದೇ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್​​ಗಳನ್ನು ಇದೇ ವೇಳೆ ವಿತರಿಸಲಾಯಿತು.​


ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್. ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು. ನಾವು ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮ ಸ್ಥೆರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು. ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.

ABOUT THE AUTHOR

...view details