ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ 792 ಸೋಂಕಿತರು ಪತ್ತೆ, 4 ಸಾವು

ಜಿಲ್ಲೆಯಲ್ಲಿ ನಿನ್ನೆಯೂ ಕೂಡ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ನಿಯಂತ್ರಿಸುವ ಸಲುವಾಗಿ ವಿವಿಧೆಡೆ ತಾತ್ಕಾಲಿಕ ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಜನಸಂದಣಿ ಕಡಿಮೆಯಾಗಿ ಸೋಂಕಿತರ ಪ್ರಮಾಣ ಇಳಿಮುಖವಾಗಲೆಂದು ಡಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ballary corona cases
ಬಳ್ಳಾರಿ ಕೊರೊನಾ ಪ್ರಕರಣಗಳು

By

Published : Apr 22, 2021, 7:29 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 792 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಈವರೆಗೆ 39,734 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 3,025 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಈ ಪೈಕಿ ಬಳ್ಳಾರಿ-432, ಸಂಡೂರು-68, ಸಿರುಗುಪ್ಪ-46, ಹೊಸಪೇಟೆ-120, ಎಚ್.ಬಿ.ಹಳ್ಳಿ-39, ಹರಪನಹಳ್ಳಿ-26, ಹಡಗಲಿ-18 ಮತ್ತು ಹೊರ ರಾಜ್ಯದಿಂದ ಬಂದ 9, ಹೊರ ಜಿಲ್ಲೆಯಿಂದ ಬಂದ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ತಾತ್ಕಾಲಿಕ ತರಕಾರಿ, ಹಣ್ಣುಗಳ ವ್ಯಾಪಾರ ಕೇಂದ್ರ ಆರಂಭ

ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣಗೊಳಿಸಲು ಹಾಗೂ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಳ್ಳಾರಿಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಮತ್ತು ಹಣ್ಣುಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ನಗರದ ವಿವಿಧ ಭಾಗಗಳಿಗೆ ವಿಕೇಂದ್ರಿಕರಿಸಲಾಗಿದೆ.

ಈ ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಫುಟ್‌ಪಾತ್​ನಲ್ಲಿ ವಾಹನ ನಿಲ್ಲಿಸಿದರೆ ಕಠಿಣ ಕ್ರಮ ಜರುಗಿಸಿ: ಹೈಕೋರ್ಟ್

ನಗರದ ಈದ್ಗಾ ಮೈದಾನ, ಐ.ಟಿ.ಐ. ಕಾಲೇಜು ಮೈದಾನ, ರೆಡಿಯೋ ಪಾರ್ಕ್, ಎನ್.ಸಿ.ಸಿ. ಮೈದಾನ ಕಂಟೋನ್ಮೆಂಟ್, ಸೆಂಟ್‌ಜಾನ್ಸ್ ಶಾಲೆಯ ಮೈದಾನ, ಕಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ, ಜಿಲ್ಲಾ ಕ್ರೀಡಾಂಗಣ, ಶ್ರೀರಾಂಪುರ ಕಾಲೋನಿಯಲ್ಲಿ ಸರ್ಕಾರಿ ಶಾಲೆ ಹತ್ತಿರ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಸೂಚಿಸಿದ್ದಾರೆ.

ABOUT THE AUTHOR

...view details