ಕರ್ನಾಟಕ

karnataka

ETV Bharat / state

ಗಣಿನಾಡಲ್ಲಿ ಕಲುಷಿತ ನೀರು-ಆಹಾರ ಸೇವಿಸಿ 70 ಕುರಿಗಳ ಸಾವು

ಕೇವಲ ಮೂರು ದಿನದಲ್ಲಿ 70 ಕುರಿಗಳು ಸಾವನ್ನಪ್ಪಿದ್ದು, ಇದರಿಂದ ಕುರಿಗಾಹಿಗಳು ಕಂಗಾಲಾಗಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಕಲುಷಿತ ನೀರು-ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದು ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.

bellary
ಗಣಿನಾಡಲ್ಲಿ ಕಲುಷಿತ ಆಹಾರ ಸೇವಿಸಿ 70 ಕುರಿಗಳ ಸಾವು

By

Published : Mar 16, 2020, 10:23 PM IST

ಬಳ್ಳಾರಿ:ಕಲುಷಿತ ನೀರು ಮತ್ತು ಆಹಾರ ಸೇವನೆ ಮಾಡಿ ಎರಡು ದಿನಗಳಲ್ಲಿ 70 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಗಣಿನಾಡಲ್ಲಿ ಕಲುಷಿತ ನೀರು-ಆಹಾರ ಸೇವಿಸಿ 70 ಕುರಿಗಳ ಸಾವು

ಶನಿವಾರ ಹಾಗೂ ಭಾನುವಾರದಂದು ಅಂಜಿನಿ ಎಂಬುವರಿಗೆ ಸೇರಿದ 2 ಕುರಿಗಳು, ನಾಗರಾಜ್​ ಎಂಬುವರ 4 ಕುರಿ, ಕೆ.ಎಂ.ಈಶ್ವರ ಎಂಬುವರ 44 ಕುರಿ, ನಾಗರಾಜ್​ 3 ಕುರಿ, ಅಂಜಿನಪ್ಪ 2 ಕುರಿ, ಕುಬೇರ 4 ಕುರಿ, ಕೆ.ಎಂ.ಲೋಕಪ್ಪ 4 ಕುರಿ, ಜಂಬಯ್ಯ 7 ಕುರಿ ಸೇರಿ ಒಟ್ಟು 70 ಕುರಿಗಳು ಸಾವನ್ನಪ್ಪಿವೆ.

ಘಟನೆ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಕುರಿಗಾಹಿ ಕುಬೇರ, ಇಲ್ಲಿನ ಸಂಡೂರು ತಾಲೂಕಿನ ವಿಠ್ಠಲಪುರ ಗ್ರಾಮದವರು ಕುರಿಗಳನ್ನು ಮೇಯಿಸೋಕೆ ವೀರಾಪುರ, ಮದಿರೆ, ವೀರಾಂಜನೇಯ ಕ್ಯಾಂಪ್ ಬಳಿ ಬಂದಿದ್ದರು. ಅಲ್ಲಿ ಆಹಾರ ಸೇವನೆ ಮಾಡಿದ ಬಳಿಕ ಕುರಿಗಳ ಮುಖ ಕಪ್ಪು ಬಣ್ಣಕ್ಕೆ ತಿರುಗಿ, ಹೊಟ್ಟೆಯ ಭಾಗ ಊದಿಕೊಂದಿತ್ತು. ಬಳಿಕ ಸಾವನ್ನಪ್ಪಿವೆ ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ್ ಆಗಮಿಸಿ ಪರಿಶೀಲಿಸಿದ್ದಾರೆ. ಕಲುಷಿತ ನೀರು-ಆಹಾರ ಸೇವನೆಯಿಂದಾಗಿ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details