ಬಳ್ಳಾರಿ: ಜಿಲ್ಲೆಯಲ್ಲಿಂದು ಹೊಸದಾಗಿ 66 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 1,554ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯಲ್ಲಿಂದು 66 ಕೊರೊನಾ ಕೇಸ್ ಪತ್ತೆ: 79 ಮಂದಿ ಗುಣಮುಖ - Bellary DC SS Nakul
ಬಳ್ಳಾರಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ 66 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಇದಲ್ಲದೆ ಜಿಲ್ಲೆಯಲ್ಲಿಂದು 79 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಮರಳಿದ್ದಾರೆ.
![ಬಳ್ಳಾರಿಯಲ್ಲಿಂದು 66 ಕೊರೊನಾ ಕೇಸ್ ಪತ್ತೆ: 79 ಮಂದಿ ಗುಣಮುಖ 66 New corona positive reported in bellary and 79 people recovered from corona66 New corona positive reported in bellary and 79 people recovered from corona](https://etvbharatimages.akamaized.net/etvbharat/prod-images/768-512-7974150-848-7974150-1594388492221.jpg)
ಬಳ್ಳಾರಿಯಲ್ಲಿಂದು 66 ಕೊರೊನಾ ಪಾಸಿಟಿವ್ ದೃಢ...79 ಮಂದಿ ಗುಣಮುಖ
ಜಿಲ್ಲೆಯಲ್ಲಿ ಇಂದು ಒಂದೇ ದಿನ 66 ಮಂದಿಗೆ ಮಹಾಮಾರಿ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಕೇವಲ ಜಿಂದಾಲ್ ಕಂಪನಿ ಒಂದರಲ್ಲೇ ಈವರೆಗೆ ಅಂದಾಜು 510 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,554ಕ್ಕೆ ಏರಿಕೆಯಾಗಿದೆ. 1,008 ಮಂದಿ ಗುಣಮುಖರಾಗಿದ್ದರೆ 41 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ 505 ಸಕ್ರಿಯ ಪ್ರಕರಣಗಳಿವೆ.
ಈ ನಡುವೆ ಇಂದು 79 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂದಾಜು 46 ಮಂದಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.