ಕರ್ನಾಟಕ

karnataka

ETV Bharat / state

ಬಳ್ಳಾರಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು, ಇಬ್ಬರು ನೀರುಪಾಲು! - ಇಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ

ವಿದ್ಯುತ್ ಕಂಬದಲ್ಲಿನ ತಂತಿ ಸ್ಪರ್ಶಿಸಿ ನಿನ್ನೆ ಹಂದ್ಯಾಳ್ ಗ್ರಾಮದ ಬಾಲಕ ಮಹಮ್ಮದ ಶರೀಫ್ ಸಾವನ್ನಪ್ಪಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಉಪ ಕಾಲುವೆಯಿಂದ ನೀರು ತರಲು ಹೋಗಿದ್ದ ವೇಣಿ ವೀರಾಪುರ ಗ್ರಾಮದ ನಿವಾಸಿ ಎರಿಸ್ವಾಮಿ (45) ಹಾಗೂ ರವಿ (22) ಎಂಬುವವರು ನೀರುಪಾಲಾಗಿದ್ದಾರೆ.

6 year old boy died from electric shock in ballary
ಬಳ್ಳಾರಿ: ವಿದ್ಯುತ್ ವಾಹಕ ಸ್ಪರ್ಶಿಸಿ ಬಾಲಕ ಸಾವು, ಇಬ್ಬರು ನೀರುಪಾಲು!

By

Published : Oct 2, 2020, 6:59 AM IST

ಬಳ್ಳಾರಿ: ತಾಲೂಕಿನ ಹಂದ್ಯಾಳ್ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿನ ತಂತಿ ಸ್ಪರ್ಶಿಸಿ ನಿನ್ನೆ ಆರು ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ.

ಹಂದ್ಯಾಳ್ ಗ್ರಾಮದ ಮಹಮ್ಮದ ಶರೀಫ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ ಕಾಲುವೆಗಯಿಂದ ನೀರು ತರಲು ಹೋದ ಇಬ್ಬರು ನೀರುಪಾಲು: ಜಿಲ್ಲೆಯ ಕುರುಗೋಡು ತಾಲೂಕಿನ ವೇಣಿ ವೀರಾಪುರ ಬಳಿಯ ಉಪ ಕಾಲುವೆಯಿಂದ ನೀರು ತರಲು ಹೋಗಿದ್ದ ಇಬ್ಬರು ನೀರುಪಾಲಾಗಿ ಸಾವನ್ನಪ್ಪಿದ್ದಾರೆ. ವೇಣಿ ವೀರಾಪುರ ಗ್ರಾಮದ ನಿವಾಸಿ ಎರಿಸ್ವಾಮಿ (45) ಹಾಗೂ ರವಿ (22) ಎಂಬುವವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಮೊದಲಿಗೆ ಉಪ ಕಾಲುವೆಯೊಳಗೆ ಯುವಕ ರವಿ ಎಂಬಾತನು ಇಳಿದಿದ್ದು, ಕಾಲು ಜಾರಿದ ಪರಿಣಾಮ ಯುವಕ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಯುವಕನ ಚಿಕ್ಕಪ್ಪ ಎರಿಸ್ವಾಮಿ ಕೂಡ ನೀರಿಗೆ ಹಾರಿ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಇಬ್ಬರೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಗೃಹರಕ್ಷಕ ದಳದ ಸಿಬ್ಬಂದಿ ಉಪ ಕಾಲುವೆ ಬಳಿ ಅಗಮಿಸಿ ಕೊಚ್ಚಿ ಹೋಗಿದ್ದ ಅವರಿಬ್ಬರ ಮೃತದೇಹವನ್ನ ಹುಡುಕಾಡಲು ಮುಂದಾಗಿದ್ದಾರೆ. ಎರಿಸ್ವಾಮಿ ಮೃತದೇಹ ಪತ್ತೆಯಾಗಿದ್ದು, ಯುವಕ ರವಿ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಈ ಕುರಿತು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details