ಬಳ್ಳಾರಿ: ಮಹಾಮಾರಿ ಕೊರೊನಾ ಜಿಲ್ಲೆಯ 5 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಬರೋಬ್ಬರಿ 586 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಳ್ಳಾರಿ: 586 ಸೋಂಕಿತರು ಪತ್ತೆ, ಐವರು ಬಲಿ - Ballary corona cases
ಜಿಲ್ಲೆಯ ಇಂದಿನ ಕೋವಿಡ್ ಬುಲೆಟಿನ್ ಹೀಗಿದೆ..
Ballry corona cases
ಹೊಸದಾಗಿ ಇಂದು 586 ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 20,163ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 248ಕ್ಕೆ ತಲುಪಿದೆ.
623 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಒಟ್ಟು ಗುಣಮುಖರ ಸಂಖ್ಯೆ 14,755ರಷ್ಟಾಗಿದೆ. ಸದ್ಯ 5,202 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.