ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ಮೇ 15ರಂದು ಮಳೆಯ ಮುನ್ಸೂಚನೆ ಇದ್ದರೂ ಉಭಯ ಜಿಲ್ಲೆಗಳಲ್ಲಿ ಮಳೆಯ ಸುರಿಯುವ ಪ್ರಮಾಣದಲ್ಲಿ ಮಾತ್ರ ಶೂನ್ಯ ಸಾಧನೆಯಾಗಲಿದೆ. ಮೇ 14ರಂದು ಬಳ್ಳಾರಿ ತಾಲೂಕಿನಲ್ಲಿ 0.1, ಹಡಗಲಿ ತಾಲೂಕಿನಲ್ಲಿ 1.5, ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ 0.8, ಹರಪನಹಳ್ಳಿ ತಾಲೂಕಿನಲ್ಲಿ 4.9, ಹೊಸಪೇಟೆ ತಾಲೂಕಿನಲ್ಲಿ 0.4, ಕೂಡ್ಲಿಗಿ ತಾಲೂಕಿನಲ್ಲಿ 0.9, ಸಂಡೂರು ತಾಲೂಕಿನಲ್ಲಿ 3.6, ಸಿರುಗುಪ್ಪ ತಾಲೂಕಿನಲ್ಲಿ ಶೂನ್ಯ ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನ ಮಳೆ ಮುನ್ಸೂಚನೆ ಮೇ 16ರಂದು ಬಳ್ಳಾರಿ ತಾಲೂಕಿನಲ್ಲಿ 6.8, ಹಡಗಲಿ ತಾಲೂಕಿನಲ್ಲಿ 69.7, ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ 41.8, ಹರಪನಹಳ್ಳಿ ತಾಲೂಕಿನಲ್ಲಿ 81.8, ಹೊಸಪೇಟೆ ತಾಲೂಕಿನಲ್ಲಿ 26.1, ಕೂಡ್ಲಿಗಿ ತಾಲೂಕಿನಲ್ಲಿ 37.6, ಸಂಡೂರು ತಾಲೂಕಿನಲ್ಲಿ 28.1, ಸಿರುಗುಪ್ಪ ತಾಲೂಕಿನಲ್ಲಿ 3.1 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ. ಮೇ 17ರಂದು ಬಳ್ಳಾರಿ ತಾಲೂಕಿನಲ್ಲಿ 22.3, ಹಡಗಲಿ ತಾಲೂಕಿನಲ್ಲಿ 23.3, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 46.7, ಹರಪನಹಳ್ಳಿ ತಾಲೂಕಿನಲ್ಲಿ 20.1, ಹೊಸಪೇಟೆ ತಾಲೂಕಿನಲ್ಲಿ 53.1, ಕೂಡ್ಲಿಗಿ ತಾಲೂಕಿನಲ್ಲಿ 49, ಸಂಡೂರು ತಾಲೂಕಿನಲ್ಲಿ 46.3, ಸಿರುಗುಪ್ಪ ತಾಲೂಕಿನಲ್ಲಿ 22.4 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಮೇ 18ರಂದು ಹಡಗಲಿ ತಾಲೂಕಿನಲ್ಲಿ 2.1, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 0.7, ಹರಪನಹಳ್ಳಿ ತಾಲೂಕಿನಲ್ಲಿ 1.7, ಹೊಸಪೇಟೆ ತಾಲೂಕಿನಲ್ಲಿ 0.7, ಕೂಡ್ಲಿಗಿ ತಾಲೂಕಿನಲ್ಲಿ 1.7, ಸಂಡೂರು ತಾಲೂಕಿನಲ್ಲಿ 1.9 ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಇಂದು-ನಾಳೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ