ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 409 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 15,072ಕ್ಕೇರಿಕೆಯಾಗಿದೆ.
ಬಳ್ಳಾರಿಯಲ್ಲಿಂದು 409 ಕೊರೊನಾ ಕೇಸ್ ಪತ್ತೆ: 9 ಮಂದಿ ಸೋಂಕಿತರು ಬಲಿ - Ballary latest news
ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ 9 ಜನರು ಮೃತಪಟ್ಟಿದ್ದಾರೆ. 409 ಮಂದಿಗೆ ಸೋಂಕು ವಕ್ಕರಿಸಿದೆ.
Ballary corona case
ಇಂದು 9 ಮಂದಿ ಬಲಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಇಂದು 500 ಮಂದಿ ಗುಣಮುಖರಾಗಿದ್ದು, ಈವರೆಗೆ 9462 ಸೋಂಕಿತರು ಕೊರೊನಾ ಗೆದ್ದು ಬಂದಿದ್ದಾರೆ. ಸದ್ಯ 5431 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.