ಬಳ್ಳಾರಿ:ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಯೋಜನೆಗೆ ಗಣಿ ಜಿಲ್ಲೆಯ 16 ಸ್ಥಳೀಯ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈವರೆಗೂ 4 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಬೀದಿಬದಿಯ ವ್ಯಾಪಾರಸ್ಥರಿಗೆ ವಿತರಿಸಿವೆ.
ಜಿಲ್ಲಾ ಮಾರ್ಗದರ್ಶಿ ಕಾರ್ಯಾಲಯದ ಜಿಲ್ಲಾ ವ್ಯವಸ್ಥಾಪಕ ನವೀನ್ ಕುಮಾರ್ ಲೇವಾದೇವಿಗಾರರಿಂದ ಸಾಲಮಾಡಿ ವ್ಯಾಪಾರ ಆರಂಭಿಸುವ ಬಡ ಹಾಗೂ ನಿರ್ಗತಿಕ ಸಮುದಾಯದ ಬೀದಿಬದಿಯ ವ್ಯಾಪಾರಸ್ಥರಿಗೆ ಸಾಲ ನೀಡುವ ಮೂಲಕ ಜಿಲ್ಲೆಯ ನಾನಾ ಬ್ಯಾಂಕುಗಳು ಆತ್ಮನಿರ್ಭರ ಭಾರತ ಯೋಜನೆಗೆ ಸಾಥ್ ನೀಡಿವೆ. ಅದರಲ್ಲಿ ಬಳ್ಳಾರಿ ಜಿಲ್ಲಾ ಮಾರ್ಗದರ್ಶಿ (ಲೀಡ್ ಬ್ಯಾಂಕ್) ಕಾರ್ಯಾಲಯ ಪ್ರಮುಖ ಪಾತ್ರವಹಿಸಿದೆ.
ಇದನ್ನೂ ಓದಿ...ಬಳ್ಳಾರಿ: ಕಿಯಾ ಮೋಟಾರ್ಸ್ ಕಾರ್ ಶೋ ರೂಂಗೆ ಚಾಲನೆ
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಮಾರ್ಗದರ್ಶಿ ಕಾರ್ಯಾಲಯದ ಜಿಲ್ಲಾ ವ್ಯವಸ್ಥಾಪಕ ನವೀನ್ ಕುಮಾರ್, ನಗರದ 16 ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 11 ಸಾವಿರ ಅರ್ಜಿಗಳು ಸ್ವೀಕೃತಿಯಾಗಿದ್ದವು. ಆ ಪೈಕಿ 10,437 ಅರ್ಜಿಗಳ ಫಲಾನುಭವಿಗಳಿಗೆ ತಲಾ 10 ಸಾವಿರ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
6,295 ಮಂದಿ ಬೀದಿಬದಿಯ ವ್ಯಾಪಾರಸ್ಥರಿಗೆ ಸಾಲ ಮಂಜೂರಾಗಿದ್ದು, ಅಂದಾಜು 6 ಕೋಟಿ ರೂ. ಸಾಲದ ಮೊತ್ತ ಬಿಡುಗಡೆಯಾಗಿದೆ. ಈಗಾಗಲೇ 4,117 ವ್ಯಾಪಾರಿಗಳಿಗೆ ಸುಮಾರು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅದಲ್ಲದೇ, ಜ.7ರಿಂದ 21ರವರೆಗೆ ನಾವು ಕೂಡ ಡಿಜಿಟಲ್ ವ್ಯವಹಾರ ಮಾಡುತ್ತೇವೆಂಬ ಘೋಷ ವಾಕ್ಯದಡಿ ಕಾರ್ಯಕ್ರಮ ಆಯೋಜಿಸಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ವ್ಯಾಪಾರಸ್ಥರಿರುವ ಸ್ಥಳದಲ್ಲೇ ಕ್ಯೂಆರ್ ಕೋಡ್ ಅನ್ನು ಡೌನ್ಲೋಡ್ ಮಾಡಿಸಿ ಅದನ್ನು ಯಾವ ರೀತಿ ಬಳಸಬೇಕು ಎಂಬುದನ್ನೂ ಹೇಳಿಕೊಡಲಾಗಿದೆ ಎಂದರು.