ಬಳ್ಳಾರಿ: ಕಂಪ್ಲಿಯ ಐತಿಹಾಸಿಕ ಸ್ಥಳವಾದ ಗಂಡುಗಲಿ ಕುಮಾರರಾಮನ ಕೋಟೆ ಮಹಾದ್ವಾರದ ಸಂರಕ್ಷಣಾ ಕಾಮಗಾರಿ ಸಂದರ್ಭದಲ್ಲಿ 39 ಫಿರಂಗಿ ಗುಂಡುಗಳು ದೊರೆತಿವೆ. ಈ ಕುರಿತು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ 39 ಫಿರಂಗಿ ಗುಂಡುಗಳು ಪತ್ತೆ!
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿನ ಕುಮಾರರಾಮನ ಕೋಟೆಯಲ್ಲಿ 39 ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಕೋಟೆಯ ಮಹಾದ್ವಾರದ ಸಂರಕ್ಷಣಾ ಕಾಮಗಾರಿಯ ಸಮಯದಲ್ಲಿ ಗುಂಡುಗಳು ದೊರೆತಿವೆ.
ಫಿರಂಗಿ ಗುಂಡುಗಳು ಪತ್ತೆ
ಗಂಡುಗಲಿ ಕುಮಾರರಾಮನ ಕೋಟೆಯ ಮೇಲ್ಭಾಗದ ತೆನೆಯ ಕಿಂಡಿಗಳ ಮೂಲಕ ಕಾವಲಿಗಾಗಿ ಬಾಗಿಲ ಮತ್ತು ಬಳಿಯಿರುವ ತೆನೆ ಆಕಾರದ ಕಿಂಡಿಗಳಿಂದ ಹಾರಿಸಲು ಉಪಯೋಗಿಸುತ್ತಿದ್ದ ವಿಜಯನಗರ ಕಾಲದ ಫಿರಂಗಿ ಗುಂಡುಗಳು ಇವಾಗಿವೆ. ಕೋಟೆಯ ಮೇಲ್ಭಾಗದಲ್ಲಿ ಒಂದೆಡೆ ಮಣ್ಣಲ್ಲಿ 39 ಫಿರಂಗಿಗಳು ಇದ್ದವು. ಈ ಫಿರಂಗಿ ಗುಂಡುಗಳನ್ನು ಸಂಗ್ರಹ ಮತ್ತು ಸಾರ್ವಜನಿಕ ಪ್ರದರ್ಶನಕ್ಕಾಗಿ ಕಮಲಾಪುರ ಪುರಾತತ್ವ ಇಲಾಖೆಯ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ.
ಇದನ್ನೂ ಓದಿ:ತುಂತುರು ಮಳೆ ನಡುವೆ ಸಂಡೂರಿನ ಕಾಡಿನಲ್ಲಿ ಗರಿಬಿಚ್ಚಿದ ನವಿಲುಗಳು: ವಿಡಿಯೋ