ಕರ್ನಾಟಕ

karnataka

ETV Bharat / state

ಗಡಿನಾಡಲ್ಲಿ 33 ಅಡಿ ಎತ್ತರದ ಗಣೇಶಮೂರ್ತಿ - ಬಳ್ಳಾರಿ ಜಿಲ್ಲೆ

ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಐಎಸ್​ ಫ್ಯಾಕ್ಟರಿ ಬಳಿ ಮಹಾಗಣಪತಿ ಸಮಿತಿಯಿಂದ 33 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಗಡಿನಾಡಲ್ಲಿ 33 ಅಡಿ ಎತ್ತರದ ಗಣೇಶಮೂರ್ತಿ

By

Published : Sep 7, 2019, 2:41 AM IST

ಬಳ್ಳಾರಿ:ಜಿಲ್ಲೆಯ ಹೊಸಪೇಟೆ ನಗರದ ಹೊರವಲಯದ ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಇವಿ ಕ್ಯಾಂಪಿನ ಐಎಸ್ ಫ್ಯಾಕ್ಟರಿ ಬಳಿ ಮಹಾಗಣಪತಿ ಸಮಿತಿ ವತಿಯಿಂದ 33 ಅಡಿಯ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಗಡಿನಾಡಲ್ಲಿ 33 ಅಡಿ ಎತ್ತರದ ಗಣೇಶಮೂರ್ತಿ

ಇಷ್ಟೊಂದು ಎತ್ತರದ ಗಣೇಶ ಮೂರ್ತಿಯು ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದು, ನೋಡುಗರ ಆಕರ್ಷಣೆಯಾಗಿದೆ. ಮಹಾಗಣಪತಿ ಸಮಿತಿಯ ಸದಸ್ಯರು ಈ ಬೃಹತ್ ಗಣೇಶ ಮೂರ್ತಿ ಸ್ಥಾಪಿಸಿದ್ದಲ್ಲದೇ, ಸತತ 12 ದಿನಗಳಕಾಲ ನಿತ್ಯವೂ ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.

ಸಾವಿರಾರು ಲೀಟರ್ ಹಾಲಿನ ಅಭಿಷೇಕದಿಂದ ನಿಮ್ಮಜ್ಜನ: ಸೆಪ್ಟೆಂಬರ್ 13ರಂದು ಶುಕ್ರವಾರ ನಿಮ್ಮಜ್ಜನ ಮಾಡಲು ಕೊನೆ ದಿನವಾಗಿದ್ದು, ಅಂದು ಸಾವಿರಾರು ಲೀಟರ್ ನಷ್ಟು ಹಾಲಿನಿಂದ ಅಭಿಷೇಕದ ಮುಖೇನ ಅದೇ ಸ್ಥಳದಲ್ಲೇ ಬೃಹತ್ ಪ್ರತಿಮೆಯನ್ನು ನಿಮ್ಮಜ್ಜನ ಮಾಡಲು ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ.

ABOUT THE AUTHOR

...view details