ಹೊಸಪೇಟೆ:ಕಳೆದ ವರ್ಷ ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಹೊಸಪೇಟೆಯ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ ಹುಡಾ ಅಧ್ಯಕ್ಷ ಅಶೋಕ ಜೀರಾ ಅವರು ಬುಧವಾರ 30 ಲಕ್ಷ ಪರಿಹಾರದ ಮೊತ್ತವನ್ನು ನೀಡಿದರು.
ಮೃತ ಅಂಗನವಾಡಿ ಕಾರ್ಯಕರ್ತೆ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ವಿತರಣೆ - ಹೊಸಪೇಟೆ ಅಂಗನವಾಡಿ ಕಾರ್ಯಕರ್ತೆ ಕುಟುಂಬಕ್ಕೆ ಪರಿಹಾರ ಹಣ
2020ರಲ್ಲಿ ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಹೊಸಪೇಟೆಯ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ ಹುಡಾ ಅಧ್ಯಕ್ಷ ಅಶೋಕ ಜೀರಾ ಅವರು ನಗರದಲ್ಲಿ ಬುಧವಾರ 30 ಲಕ್ಷ ಪರಿಹಾರದ ಮೊತ್ತ ನೀಡಿದ್ರು.
hospete
ನಗರದ 15ನೇ ವಾರ್ಡಿನ 2ನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶಾರದಾ ಕಳೆದ ವರ್ಷ ಕೊರೊನಾದಿಂದ ಮೃತಪಟ್ಟಿದ್ದರು. ಸರ್ಕಾರ ಕೊರೊನಾ ವಾರಿಯರ್ಸ್ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಅದರಂತೆ ಪರಿಹಾರ ಮೊತ್ತವನ್ನು ನೀಡಲಾಗಿದೆ.
ಈ ವೇಳೆ ಸಿ.ಡಿ.ಪಿ.ಒ. ಅಧಿಕಾರಿ ಸಿಂಧೂ ಎಲಗಾರ್, ಸಚಿವ ಆನಂದ ಸಿಂಗ್ ಆಪ್ತ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್ ಇನ್ನಿತರರಿದ್ದರು.